ಸ್ಯಾಂಡಲ್ ವುಡ್ ನಲ್ಲಿ 2020ರಲ್ಲಿ ತೆರೆಕಂಡು ಗಮನ ಸೆಳೆದ ಸಿನಿಮಾಗಳು..!
2020… ಸಿನಿಮಾ ರಂಗದ ಪಾಲಿನ ಕರಾಳ ವರ್ಷ ಅಂದ್ರೆ ತಪ್ಪಾಗೋದಿಲ್ಲ. ಕೊರೊನಾ ಹಾವಳಿಯಿಂದ ರಿಲೀಸ್ ಹಂತದಲ್ಲಿರುವ ಸಿನಿಮಾಗಳು ಪೋಸ್ಟ್ ಪೋನ್ ಆಗಿವೆ. ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಲು ಮೀನಾಮೇಷ ಎಣಿಸುತ್ತಿವೆ. 8-9 ತಿಂಗಳುಗಳ ಕಾಲ ಥಿಯೇಟರ್ ಗಳು ಬಂದ್ ಆಗಿ ಸಿನಿಮೋದ್ಯಮ ನೆಲಕಚ್ಚಿದೆ. 2021 ರ ವರ್ಷವೂ ಕೂಡ ಆರಂಭವಾಗಿದೆ. 2021 ರಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಲಿಸ್ಟ್ ನಲ್ಲಿವೆ.
2020 ರಲ್ಲಿ ರಿಲೀಸ್ ಆದ ಕನ್ನಡದ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸಿನಿಪ್ರಿಯರಿಗೆ ಬೇಸರವಾಗುತ್ತೆ. ಯಾಕಂದ್ರೆ ದಶಕಗಳ ಬಳಿಕ ವರ್ಷೊಂದರಲ್ಲಿ ರಿಲೀಸ್ ಆದ ಅತ್ಯಂತ ಕಡಿಮೆ ಸಿನಿಮಾಗಳು ಇದೇ ವರ್ಷದಲ್ಲಿರಬೇಕು. ಹತ್ತಿರ ಹತ್ತಿರ 76 ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ. ಬಹುತೇಕ ಸಿನಿಮಾಗಳು ಥಿಯೇಟರ್ ಬದಲಾಗಿ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿ ಹಿಟ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಒಟಿಟಿಯಲ್ಲಿ ಥಿಯೇಟರ್ ಗಳಲ್ಲಿ ರಿಲೀಸ್ ಆದ ಕನ್ನಡದ ಸಿನಿಮಾಗಳ ಪಟ್ಟಿ ಹೀಗಿವೆ.
ಲವ್ ಮಾಕ್ ಟೇಲ್ – ಜನವರಿ 31 – ಮಿಲನಾ ನಾಗರಾಜ್ ಡಾರ್ಲಿಂಗ್ ಕೃಷ್ಣ ಅಭಿನಯದ ಈ ಸಿನಿಮಾ ಥಿಯೇಟರ್ ಗಳಲ್ಲಿ ಮೊದಲಿಗೆ ರಿಲೀಸ್ ಆದ ಹಂತದಲ್ಲಿ ಯಶಸ್ವಿಯಾಗಿರಲಿಲ್ಲ. ಬಳಿಕ ಹೆಚ್ಚು ಪ್ರೇಕ್ಷಕರನ್ನ ಗಮನ ಸೆಲೆಯುತ್ತಿದ್ದ ವೇಳೆಯೇ ಲಾಕ್ ಡೌನ್ ಆಗಿತ್ತು. ನಂತರ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ರಿಲಿಸ್ ಆಗಿ ಸಖತ್ ಹೈಪ್ ಕ್ರೇಯೇಟ್ ಮಾಡಿತ್ತು.
ಮಾರ್ಚ್ 12 – ಶಿವಾರ್ಜುನ : ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಹ ಇದೇ ವರ್ಷವೇ ರಿಲೀಸ್ ಆಗಿತ್ತು.
ಜನವರಿ 24- ನಾನು ಮತ್ತು ಗುಂಡ – ನಾಯಿ ಮತ್ತು ಮನುಷ್ಯರ ನಡುವಿನ ಒಡನಾಟದ ಬಗ್ಗೆ ಈ ಸಿನಿಮಾದಲ್ಲಿ ಎಳೆಎಳೆಯಾಗಿ ತೋರಿಸಲಾಗಿದೆ.
ಇನ್ನೂ ಇದೇ ವರ್ಷ ಒಟಿಟಿ ಹಾಗೂ ಥಿಯೇಟರ್ ಗಳಲ್ಲಿ ಮನೆ ನಂ. 13 , ಸಾಗುತ ದೂರ ದೂರ, ತುಂಡೈಕ್ಲ ಸಹವಾಸ, ಕಾಣದಂತೆ ಮಾಯವಾದನು ಹೀಗೆ ಹಲವಾರು ಸಿನಿಮಾಗಳು ರಿಲೀಸ್ ಆಗಿ ಪ್ರೇಕ್ಷಕರನ್ನ ಮನರಂಜಿಸಿವೆ.
ರಾಜೀವ IAS, ವೇಷಧಾರಿ, ಗುಡಮನ : ಜನವರಿ – 3
2020ರ ಮೊದಲ ಸಿನಿಮಾ ರಾಜೀವ ಐಎಎಸ್. ಜನವರಿ 3 ರಂದು ಒಂದೇ ದಿನ ಒಟ್ಟು ಮೂರು ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ದವು. ರಾಜೀವ IAS, ವೇಷಧಾರಿ, ಗುಡಮನ ಅವಾಂತರ ಸಿನಿಮಾಗಳು ತೆರೆಕಂಡಿದ್ದವು.
ACT 1978 – ನವೆಂಬರ್ -20 : ಇನ್ನೂ ಲಾಕ್ ಡೌನ್ ಬಳಿಕ ಥಿಯೇಟರ್ ಗಳಲ್ಲಿ ತೆರೆಕಂಡ ಮೊದಲ ದಕ್ಷಿಣ ಭಾರತದ ಸಿನಿಮಾ. ಈ ಸಿನಿಮಾ ರಿಲೀಸ್ ಆಗ್ತಿದ್ದಂತೆ, ಸಿನಿಮಾರಂಗದವರು ನಟನನಟಿಯರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರೇಕ್ಷಕರಿಂದಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಈಗಲೂ ಯಶಸ್ವಿಯಾಗಿ ತೆರೆಕಾಣ್ತಿದೆ.
ಫೆಬ್ರವರಿ -28 – ಮಾಯಾಬಜಾರ್
ಫೆಬ್ರವರಿ -21 – ಪಾಪ್ ಕಾರ್ನ್ ಮಂಕಿ ಟೈಗರ್ : ಡಾಲಿ ಧನಂಜಯ್ ಅಭಿನಯದ ಸಿನಿಮಾ
ಫೆಬ್ರವರಿ 7 – ಜೆಂಟಲ್ ಮೆನ್ – ಪ್ರಜ್ವಲ್ ದೇವರಾಜ್ ನಟನೆಯ ಜೆಂಟಲ್ ಮನ್ ನಲ್ಲಿ ಪ್ರಜ್ವಲ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ರಜಿನಿಕಾಂತ್ ನಿರ್ಧಾರದಿಂದ ನಿರಾಸೆಯಾಗಿದೆ : ಕಮಲ್ ಹಾಸನ್
OTT
ಲಾ, ಫ್ರೆಂಚ್ ಬಿರಿಯಾನಿ, ಭೀಮಸೇನ ನಳಮಹಾರಾಜ
ಒಟಿಟಿಯಲ್ಲಿ ಕೆಲ ಕನ್ನಡ ಸಿನಿಮಾಗಳು ರಿಲೀಸ್ ಆಗಿ ಸಖತ್ ಸೌಂಡ್ ಮಾಡಿದ್ದವು. ಆ ಪೈಕಿ ರಾಗಿಣಿ ಚಂದ್ರನ್ ಅಭಿನಯದ ‘ಲಾ’, ಡ್ಯಾನಿಶ್ ಸೇಠ್ ಅಭಿನಯದ ಫ್ರೆಂಚ್ ಬಿರಿಯಾನಿ, ಭೀಮಸೇನ ನಳಮಹಾರಾಜ ಸಿನಿಮಾಗಳು ಸಿನಿಮಾಗಳು ಡಿಜಿಟಲ್ ಮೀಡಿಯಾದಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದವು.
ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳಿರುವ ‘ಶಕೀಲಾ’ ಸಿನಿಮಾ ಈ ವರ್ಷ ರಿಲೀಸ್ ಆಗಿರುವ ಕಡೆಯ ಸಿನಿಮಾವಾಗಿದೆ. ಸೌತ್ ಇಂಡಸ್ಟ್ರಿಯ ನೀಲಿ ತಾರೆ ಶಕೀಲಾ ಅವರ ಬಯೋಪಿಕ್ ಚಿತ್ರ ಇದಾಗಿದ್ದು, ರಿಚಾ ಚಡ್ಡಾ ಶಕೀಲಾ ಅವರ ಪಾತ್ರದಲ್ಲಿ ನಟಿಸಿದ್ದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಶಕೀಲಾ ತೆರೆಕಂಡಿದೆ.
2020 ರಲ್ಲಿ ಅಂತ್ಯಗೊಂಡ ತೆಲುಗು ಸಿನಿತಾರೆಯರ ಬದುಕು: ಕಲಾವಿಧರಿಗೆ ಗೌರವ ನಮನ..!
ರೀ ರಿಲೀಸ್ ಆಗಿದ್ದ ಸಿನಿಮಾಗಳು :
ಇನ್ನೂ ಲಾಕ್ ಡೌನ್ ಬಳಿಕ ಥಿಯೇಟರ್ ಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಹೊಸ ಸಿನಿಮಾಗಳ ಬಿಡುಗಡೆಗೆ ಮೇಕರ್ಸ್ ಹಿಂದೇಟು ಹಾಕಿದ್ದಾರೆ. ಹೀಗಾಗಿ ಮೊದಲೇ ರಿಲೀಸ್ ಆಗಿ ಸಕ್ಸಸ್ ಕಂಡಿದ್ದ ಅನೇಕ ಸಿನಿಮಾಗಳು ಮತ್ತೊಮ್ಮೆ ರೀ ರಿಲೀಸ್ ಆಗಿದ್ದವು. ಆ ಪೈಕಿ ಶಿವಾರ್ಜುನ, ಕೋಟಿಗೊಬ್ಬ , ಟಗರು, ಜೆಂಟಲ್ ಮೆನ್, ದಿಯಾ, ಲವ್ ಮಾಕ್ಟೇಲ್ ಸೇರಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel