Kannada Hit Movies 2022 : ಸ್ಯಾಂಡಲ್ ವುಡ್ ಗೆ ಇದು ಸುವರ್ಣ ವರ್ಷ…
ಚಂದನವನಕ್ಕೆ ಈ ವರ್ಷ ಒಂದು ರೀತಿಯಲ್ಲಿ ಸುವರ್ಣ ವರ್ಷ ಎನ್ನಬಹುದು. ಕನ್ನಡದ ಚಿತ್ರವೊಂದು ಮೊದಲ ಬಾರಿಗೆ ಸಾವಿರ ಕೋಟಿ ಗಳಿಸದ ದಾಖಲೆ ಈ ವರ್ಷ ಬರೆಯಿತು. ಇನ್ನೂ ಮೂರ್ನಾಲ್ಕು ಚಿತ್ರಗಳು 400 ಕೋಟಿ 200 ಕೋಟಿ 100 ಕೋಟಿಯ ಕ್ಲಬ್ ಸೇರಿಕೊಂಡಿವೆ.
ಈ ವರ್ಷದ ಸಕ್ಸಸ್ ಸಿಕ್ಕಿದ್ದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆಯ ಲವ್ ಮಾಕ್ಟೇಲ್ 2 ಚಿತ್ರ ದಿಂದ. ಈ ಚಿತ್ರ ಯಶಸ್ವಿಯಾಗುವುದರ ಜೊತೆಗೆ ಬೇರೆ ಭಾಷೆಗಳಿಗೆ ರೀಮೇಕ್ ರೈಟ್ಸ್ ಸಹ ಮಾರಟಗೊಂಡವು. ಆನಂತ ಬಂದದ್ದು ಕೆಜಿಎಫ್ 2 ಎಂಬ ಸುನಾಮಿ ಕನ್ನಡದ ಚಿತ್ರವೊಂದು ಸಾವಿರ ಕೋಟಿಗಳಿಸಿದ ಮೊದಲ ಚಿತ್ರವೆಂಬ ಸಾರ್ವಕಾಲಿಕ ದಾಖಲೆಯನ್ನ ಬರೆಯಿತು.
ಮಾಸ್ ಸಿನಿಮಾದ ನಂತರ ಕಣ್ಣೀರು ಹಾಕಿಸಿ ಗೆದ್ದ ಚಿತ್ರ 777 ಚಾರ್ಲಿ. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ಶ್ವಾನದ ಜೊತೆಗಿನ ಬಾವುಕ ಪ್ರಯಾಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯಿತು. ಇದಾದ ನಂತರ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣಾ ಚಿತ್ರ ದೊಡ್ಡ ಹೈಪ್ ಸೃಷ್ಟಿ ಮಾಡಿ ಉತ್ತಮ ಕಲೆಕ್ಷನ್ ಮಾಡಿ ಗಮನ ಸೆಳೆಯಿತು.
ಕಾಂತಾರ : ಇಡೀ ಭಾರತ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಮತ್ತೊಂದು ಚಿತ್ರ ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರ . ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡ ಈ ಚಿತ್ರ ಆನಂತರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತನ್ನನ್ನ ತಾನೇ ಪ್ರಮೋಟ್ ಮಾಡಿಕೊಂಡಿತು.
Kannada Hit Movies 2022: This is a golden year for Sandalwood…








