ಪೊಗರು ಪ್ರಚಾರ ಮಾಡದೇ ಅಸಡ್ಡೆ ತೋರಿದ ರಶ್ಮಿಕಾ ವಿರುದ್ಧ ಕನ್ನಡಿಗರ ಆಕ್ರೋಶ..!
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ರು. ನಂತರ ತೆಲುಗು ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಹಲವಾರು ಪ್ರಾಜೆಕ್ಟ್ ಗಳು ಅವರ ಕೈಲಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ಹೊಸ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ರಶ್ಮಿಕಾ. ಆದ್ರೆ ಕನ್ನಡದವರೇ ಆದ್ರೂ ಕನ್ನಡ ಸಿನಿಮಾ ಮೂಲಕವೇ ಫೇಮಸ್ ಆದ್ರೂ ಕನ್ನಡಕ್ಕೆ ಅವಮಾನ, ಕನ್ನಡವನ್ನ ತಾತ್ಸಾರ ಕನ್ನಡದ ಅವಹೇಳನ ಮಾಡುತ್ತಲೇ ಕನ್ನಡಿಗರ ಪಾಲಿಗೆ ತಾತ್ಸಾರವಾದ ನಟಿ ಕೂಡ ರಶ್ಮಿಕಾನೆ. ಕನ್ನಡದವರಿಗೆ ರಶ್ಮಿಕಾ ಮೇಲೆ ಅಭಿಮಾನಕ್ಕಿಂತ ಹೆಚ್ಚು ಕೋಪವೇ ಇದೆ. ಇದಕ್ಕೆ ಕಾರಣ ಖುದ್ದು ರಶ್ಮಿಕಾ. ಒಟ್ನಲ್ಲಿ ಸದಾ ಕಾಂಟ್ರವರ್ಸಿ ಟ್ರೋಲ್ ಗಳಿಂದಲೇ ಫೇಮ್ ನಲ್ಲಿರುವ ರಶ್ಮಿಕಾ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
`ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ ಸಂತೋಷ ಪಡಿ’ : ಜಗ್ಗೇಶ್ ಬೇಸರ
ಕಾರಣ ಪೊಗರು ಸಿನಿಮಾ… ಹೌದು ಬೇರೆ ಭಾಷೆಗಳ ಸಿನಿಮಾಗಳು, ತಾನು ನಟಿಸದೇ ಇರುವ ಸಿನಿಮಾಗಳ ಮೇಲೆ ಇರುವ ಪ್ರೀತಿ ಕಾಳಜಿ ಗೌರವ ತನ್ನದೇ ನಟನೆಯ ಪೊಗರು ಸಿನಿಮಾ ಮೇಲೆ ರಶ್ಮಿಕಾಗೆ ಯಾಕಿಲ್ಲ ಅನ್ನೋದು ಸದ್ಯಕ್ಕೆ ದ್ದಿರುವ ಪ್ರಶ್ನೆ ಯಾಕಂದ್ರೆ ಯಾವುದೇ ಸಂದರ್ಶನ ಕಾರ್ಯಕ್ರಮಗಳಿರಬಹುದು ಅಥವ ಬೇರೆ ಭಾಷೆಯ ಸಿನಿಮಾಗಳ ಪ್ರಚಾರದಲ್ಲಿ ತೋರುವ ಆಸಕ್ತಿಯನ್ನ ಪೊಗರು ಸಿನಿಮಾ ಮೇಲೆ ತೋರಿಲ್ಲ ರಶ್ಮಿಕಾ. ಕನಿಷ್ಠ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಿನಿಮಾ ನೋಡುವಂತೆ ಪ್ರಚಾರವನ್ನೂ ಮಾಡಿಲ್ಲ. ಇದು ಮತ್ತೊಮ್ಮೆ ಕನ್ನಡಿಗರನ್ನ ಕೆರಳಿಸಿದ್ದು, ಟ್ರೋಲಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡೋಕೆ ಶುರುಮಾಡಿದ್ದಾರೆ. ಆದ್ರೆ ರಶ್ಮಿಕಾ ಮಾತ್ರ ತಾನು ನ್ಯಾಷನಲ್ ಕ್ರಶ್ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅನ್ನೋ ಹಾಗೆ ಕೆರಿಯರ್ ಕಡೆ ಫೋಕಸ್ ಮಾಡ್ತಿದ್ದಾರೆ.
ಮಾಸ್ಕ್ ಧರಿಸದ ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೋಲಿಸರನ್ನು ಒತ್ತಾಯಿಸಿದ ನೆಟ್ಟಿಗರು
ಅಷ್ಟೇ ಅಲ್ಲ ಕೆಲ ಮೂಲಗಳ ಪ್ರಕಾರ ರಶ್ಮಿಕಾ ಪೊಗರು ಸಿನಿಮಾದ ಮೇಕರ್ಸ್ ಜೊತೆಗೂ ಕಿರಿಕ್ ತೆಗೆದುಕೊಂಡಿದ್ದಾರಂತೆ. ಹೌದು ಎಲ್ಲೂ ಸಿನಿಮಾದ ಬಗ್ಗೆ ಪ್ರಚಾರ ಮಾಡದೆ ತಾನು ಬ್ಯುಸಿ ನಟಿ ನನಗೆ ಪ್ರಚಾರ ಮಾಡೋಕೆ ಸಮಯವಿಲ್ಲ ಎಂದು ಸಿನಿಮಾ ನಿರ್ದೇಶಕರ ಜೊತೆಗೂ ಕಿರಿಕ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇದು ಮೊದಲೇನಲ್ಲ. ರಶ್ಮಿಕಾ ಬೇರೆ ಬಾಷೆಗಳ ಸಿನಿಮಾಗಳು ಬೇರೆ ಭಾಷೆಗಳ ಮೇಲೆ ತೋರಿಸುವ ಒಲವು ತನ್ನ ಸ್ವಂತ ಭಾಷೆ ಮೇಲೆ ಯಾಕೆ ತೋರುವುದಿಲ್ಲ ಎನ್ನುವುದೇ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ದೇ ಕನ್ನಡವರೇ ಆದ ರಶ್ಮಿಕಾ ಮೇಲೆ ಕನ್ನಡಿಗರಿಗೇ ಹೆಚ್ಚು ಕೋಪ ಎನ್ನೋದ್ರಲ್ಲಿ ನೋ ಡೌಟ್..
ಪೊಗರು ಸಿನಿಮಾ ಪ್ರದರ್ಶನ ನಿಲ್ಲಿಸಿ : ಚಿತ್ರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ
ಇನ್ನೂ ಧ್ರುವ ಸರ್ಜಾ ನಾಯಕನಾಗಿರುವ ಪೊಗರು ಸಿನಿಮಾದ ಬಗ್ಗೆ ಮಾತನಾಡುವುದಾದ್ರೆ ಸಿನಿಮಾ ಇದೇ ತಿಂಗಳ 19 ರಂದು ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. BOX OFFICE ನಲ್ಲಿ ಧೂಳೆಬ್ಬಿಸಿದ್ದು, 25 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿದೆ. ತಮಿಳು ತೆಲುಗು ಕನ್ನಡದಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ಧ್ರುವ ಮಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ರೆ, ಸೆಂಟಿಮೆಂಟ್ ಸ್ಟೋರಿ ಅಭಿಮಾನಿಗಳ ಮನಮುಟ್ಟಿದೆ. ಒಟ್ಟಾರೆ ಸಿನಿಮಾ ಸೂಪರ್ ಹಿಟ್ ಆಗಿ ಹೌಸ್ ಫುಲ್ ಆಗಿ ಓಡುತ್ತಿದೆ.