ಮಾಸ್ಕ್ ಧರಿಸದ ಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೋಲಿಸರನ್ನು ಒತ್ತಾಯಿಸಿದ ನೆಟ್ಟಿಗರು
ಮುಂಬೈ, ಫೆಬ್ರವರಿ23: ಮಾಸ್ಕ್ ಧರಿಸದೆ ಕಂಗನಾ ರಣಾವತ್ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲ. ಸೆಪ್ಟೆಂಬರ್‌ನಲ್ಲಿ ತನ್ನ ಕಚೇರಿಯನ್ನು ನೆಲಸಮ ಮಾಡಿದ ಬಿಎಂಸಿ ಕಚೇರಿಗೆ ಭೇಟಿ ನೀಡಿದಾಗ ಕೂಡ ಮಾಸ್ಕ್ ಧರಿಸಿರಲಿಲ್ಲ. ಈಗ ಮತ್ತೊಮ್ಮೆ ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಕಂಗನಾ ಕಾಣಿಸಿಕೊಂಡಿದ್ದು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇತ್ತೀಚೆಗೆ ತಮ್ಮ ಆಕ್ಷನ್ ಚಿತ್ರ ‘ಧಕಾಡ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಭಾನುವಾರ ಸಂಜೆ ಮುಂಬೈಗೆ ಆಗಮಿಸಿದರು.
ವಿಮಾನ ನಿಲ್ದಾಣದಿಂದ ತನ್ನ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರು ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದು, ನೆಟ್ಟಿಗರು ಕೋವಿಡ್-19 ನಿಯಮಗಳನ್ನು ಏಕೆ ಉಲ್ಲಂಘಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅವರಲ್ಲಿ ಕೆಲವರು ಮುಂಬೈ ಪೊಲೀಸರು ಆಕೆಯ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಚಲನ್ ನೀಡುವಂತೆ ಒತ್ತಾಯಿಸಿದ್ದಾರೆ.
ಆಕೆಯ ಪೋಟೋ ಗೆ ಬಿಎಂಸಿ ಯನ್ನು ಟ್ಯಾಗ್ ಮಾಡಿರುವ ಇನ್ಸ್ಟಾಗ್ರಾಮ್ ಬಳಕೆದಾರರು, “ಹಮ್ಕೊ ಕ್ಯು ಮಾಸ್ಕ್ ನಹಿ ಪೆಹ್ನೆ ಪಾರ್ ಫೈನ್ ಲಗ್ತಾ ಹೈ?” (ಮಾಸ್ಕ್ ಧರಿಸದಿದ್ದರೆ ನಮಗೆ ಯಾಕೆ ದಂಡ ವಿಧಿಸಲಾಗುತ್ತದೆ?) ಎಂದು ಪ್ರಶ್ನಿಸಿದ್ದಾರೆ.
ಮುಂಬಯಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ಪೊಲೀಸರು ಮಾಸ್ಕ್ ಧರಿಸದಿರುವುದು ಕಂಡುಬಂದರೆ ಜನರಿಗೆ ದಂಡ ವಿಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಶುಂಠಿ ಚಹಾದ ಹಲವಾರು ಆರೋಗ್ಯ ಪ್ರಯೋಜನಗಳು https://t.co/mQJ9MC4yAp
— Saaksha TV (@SaakshaTv) February 19, 2021
ವೀಸಾ ಮತ್ತು ಆಟಗಾರರ ಸುರಕ್ಷತೆ ಬಗ್ಗೆ ಭಾರತ ಲಿಖಿತ ಭರವಸೆ ನೀಡದಿದ್ದರೆ ಟಿ 20 ವಿಶ್ವಕಪ್ ಸ್ಥಳಾಂತರಗೊಳಿಸಿ – ಪಾಕಿಸ್ತಾನ ಬೆದರಿಕೆ https://t.co/CNAQObjPvt
— Saaksha TV (@SaakshaTv) February 21, 2021
ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ https://t.co/stSfacfwUI
— Saaksha TV (@SaakshaTv) February 19, 2021