ಮಹಿಳಾ ಪ್ರಧಾನ ಕಥೆ ಹೊಂದಿರುವ ಸ್ಯಾಂಡಲ್ ವುಡ್ ನ ಹೊಸ ಚಿತ್ರ ನಕ್ಷೆಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದ ಫಸ್ಟ್ ಲುಕ್ ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಚಿತ್ರಕ್ಕೆ ಮಧು ಆಕ್ಷನ್ ಕಟ್ ಹೇಳಿದ್ದು, ಶಿವಚಿಂತನ್ ಶ್ರೋಫ್ ಅವರು ಬಂಡವಾಳ ಹೂಡಿದ್ದಾರೆ. ಸಾಯಿ ವನಗೌರಿ ಫಿಲ್ಮ್ಸ್ ನ ಬ್ಯಾನರ್ ಅಡಿ ಚಿತ್ರ ಮೂಡಿಬರುತ್ತಿದೆ.


ರೈಲ್ವೇ ಟ್ರ್ಯಾಕ್ ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಯುವತಿಯ ಡೆತ್ ಮಿಸ್ಟರಿಯ ಪತ್ತೆ ಕಾರ್ಯದಲ್ಲಿ ತೊಡಗುವ ಜರ್ನಲಿಸ್ಟ್ ಹಾಗೂ ಪೊಲೀಸ್ ಅಧಿಕಾರಿಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ.
ಇನ್ನೂ ಚಿತ್ರದಲ್ಲಿ ಅನೇಕ ಖ್ಯಾತ ನಟರ ದೊಡ್ಡ ತಾರಾಬಳಗವೇ ಇದೆ. ಕೆಜಿಎಫ್ ಖ್ಯಾತಿಯ ಅರ್ಚನಾ ಎಸ್ ಜೋಯಿಸ್, ಕಿರಿಕ್ ಪಾರ್ಟಿ ಅವನೇ ಶ್ರೀಮನ್ ನಾರಾಯಣ ಚಿತ್ರದಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ದಿಯಾ ಖ್ಯಾತಿ ಖುಷಿ ರವಿ, ನಿಷ್ಕರ್ಶದಲ್ಲಿ ಅಭಿನಯಿಸಿದ್ದ ಸುಮನ್ ನಾಗರ್ಕರ್, 6-5=2 ಖ್ಯಾತಿಯ ವಿಜಯ್ ಚೆಂಡೂರ್ ಹೀಗೆ ಅನೇಕರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.



ಚಿತ್ರದ ಚಿತ್ರೀಕರಣ ಭಾಗಶಃ ಮುಗಿದಿದ್ದು, ಇನ್ನು 2 ತಿಂಗಳ ಒಳಗೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡಿಕೊಮಡಿದೆ. ಇನ್ನೂ ಚಿತ್ರ ಟೀಸರ್ ಗೆ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.










