ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕಿದೆ: ಸಚಿವ ವಿ.ಸೋಮಣ್ಣ
ಚಾಮರಾಜನಗರ: 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕಾಯ೯ಕ್ರಮದಲ್ಲಿ ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು, ಅತಿಥಿ ಗಣ್ಯರು, ಮಾಧ್ಯಮ ಮಿತ್ರರು, ಹಾಗೂ ಅಧಿಕಾರಿಗಳು ಸೇರಿದಂತೆ ನೆರೆದಿದ್ದ ಸವ೯ರಿಗೂ ಶುಭಾಯಗಳನ್ನು ಕೋರಿದ ಸಚಿವರು, ಪ್ರತಿ ವಷ೯ ಆಚರಿಸುವ ಈ ನಾಡಹಬ್ಬವು ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಪ್ರಗತಿಗೆ ಪೂರಕ ಹಾಗೂ ಪ್ರೇರಕವಾಗಿರುವುದಲ್ಲದೆ ಸಹಬಾಳ್ಳೆಯ ಸಂದೇಶ ನೀಡಿ ಸೌಹಾದ೯ತೆಯನ್ನು ಪಸರಿಸುವ ಶುಭದಿನವಾಗಿದೆ ಎಂದರು.
ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಮತ್ತು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದ ಮಹಾನ್ ಚೇತನಗಳಿಗೆ ಕೃತಜ್ಞತೆ ಸಲ್ಲಿಸಿದ ಸಚಿವರು, ಕನ್ನಡ, ಕನಾ೯ಟಕ, ಕರುನಾಡು ಎಂಬುದು ಕೇವಲ ನೆಲ ಮತ್ತು ಭಾಷೆಯಲ್ಲ ಅದೊಂದು ಕನ್ನಡಿಗರ ಭಾವನೆ ಮತ್ತು ಭಾಂದವ್ಯ. ಕವಿಮನದ ಆಶಯದಂತೆ “ಕನ್ನಡ ರಾಜ್ಯೋತ್ಸವ’ ನಮ್ಮೆಲ್ಲರ “. ನಿತ್ಯ ಉತ್ಸವ ” ವಾಗಬೇಕೆಂದರು.
ದಾಸಶ್ರೇಷ್ಠರ ಭಕ್ತಿ ಪಂಥ ಮತ್ತು ಕೀತ೯ನೆಗಳು,ಬಸವಾದಿ ಶರಣರ ವಚನ ಸಾಹಿತ್ಯ ಸಾಮಾಜಿಕ ಕ್ರಾಂತಿಯು ಮೂಲಕ ನಾಡು-ನುಡಿ ಉಜ್ಜಲಗೊ೦ಡಿದೆ ಎಂದು ವಾಖ್ಯಾನಿಸಿದ ಸಚಿವರು, ಚಾಮರಾಜನಗರ ಜಿಲ್ಲೆಯು ಕನ್ನಡ ನಾಡು ನುಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಅನ್ಯ ಭಾಷೆಗಳ ಪ್ರಭಾವದ ನಡುವೆಯೂ ತನ್ನತನವನ್ನು ಗಟ್ಟಿಯಾಗಿ ಉಳಿಸಿಕೊಂಡು ಭಾಷಾ ಸಾಮರಸ್ಯ ಸಾರುತ್ತಿರುವುದು ಒಂದಡೆಯಾದರೆ ಕನ್ನಡ ಚಿತ್ರರಂಗದ ಮೇರು ಪ್ರತಿಭೆ ವರನಟ ಡಾ.ರಾಜ್ ಕುಮಾರ್ ಹಾಗೂ ಶ್ರೇಷ್ಠ ಲೇಖಕ ಶ್ರೀ ಜಿ.ಪಿ ರಾಜರತ್ನಂ ರವರುಗಳನ್ನು ವಿಶ್ವಕ್ಕೆ ಕೊಡುಗೆ ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎ೦ದರು.
ಸವಾಲುಗಳ ನಡುವೆಯೂ ರಾಜ್ಯದ ಸವಾ೯೦ಗೀಣ ಅಭಿವೃದ್ಧಿಗೆ ಸಕಾ೯ರ ದೃಡ ಸಂಕಲ್ಪ ಮಾಡಿದ್ದು, ಸನ್ಮಾನ್ಯ ಮುಖ್ಯಮಂತ್ರಿಗಳು ಸಮಗ್ರ ಕನಾ೯ಟಕಕ್ಕೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ಸಂಪಕ೯.ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಜೊತೆಗೆ ರೈತರು, ವೃದ್ಧರು ಮತ್ತು ದುಬ೯ಲರ ಏಳಿಗೆಗೆ ಒತ್ತು ನೀಡುತ್ತಿವುದನ್ನು ಉಲ್ಲೇಖಿಸಿ ಸಕಾ೯ರವು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಕೈಗೊಂಡಿರುವ ಸಂಕ್ಷಿಪ್ತ ಮಾಹಿತಿಯನ್ನು ಸಂದೇಶದಲ್ಲಿ ನೀಡಿದರು.
ಮುಂದುವರಿದು ಮಾತನಾಡಿದ ಸಚಿವರು ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆಯ ವಸತಿ ರಹಿತ ಅಹ೯ ಫಲಾನುಭವಿಗಳಿಗೆ ವಸತಿ ಕಲ್ಪಸುವ ಮೂಲಕ ವಸತಿರಹಿತ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಕಾ೯ರ ದೃಢ ಸಂಕಲ್ಪ ಮಾಡಿದೆ ಜೊತೆಗೆ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಬಾಕಿ ಉಳಿದಿರುವ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾಯ೯ವನ್ನು ಕೈಗೆತ್ತಿಕೊಂಡು ಈ ಭಾಗದ ರೈತರ ಬದುಕನ್ನು ಹಸನುಗೊಳಿಸಲಾಗುವುದೆಂದು ಪ್ರಸ್ತಾಪಿಸಿದರು .
ಅಂತಿಮವಾಗಿ,ಯುವ ಜನರು ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಬೇಕೆಂದು ಕರೆ ನೀಡಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಚಾಮರಾಜನಗರ ವಿ.ಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಪುಟ್ಟರಂಗಶೆಟ್ಟಿಯವರು ವಹಿಸಿದ್ದರು.ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಶ್ರೀಮತಿ ಸಿ.ಎಂ ಆಶಾ, ಉಪಾಧ್ಯಕ್ಷೆ ಶ್ರೀಮತಿ ಪಿ.ಸುಧಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಪಿ.ಬಿ.ಶಾಂತಮೂತಿ೯, ಜಿಲ್ಲಾಧಿಕಾರಿ ಶ್ರೀ ಎಂ.ಆರ್.ರವಿ, ಜಿಲ್ಲಾ ಎಸ್ಪಿ ದಿವ್ಯಾ ಸಾರಾ ಥಾಮಸ್, ಜಿಪಂ ಸಿಇಓ ಶ್ರೀಮತಿ ಕೆ.ಎಂ ಗಾಯತ್ರಿ , ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇನ್ನು ಧ್ವಜಾರೋಹಣದ ಬಳಿಕ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಸಚಿವರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಬಳಿಕ ಬೆಟ್ಟಕ್ಕೆ ತೆರಳುವ ದಾರಿಯಲ್ಲಿರುವ ಗುಂಡಿ ಮುಚ್ಚುವ ಕೆಲಸವನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ದೂರವಾಣಿಯಲ್ಲಿ ಲೋಕೋಪಯೋಗಿ ಇಲಾಖೆಯ ಕಾಯ೯ಪಾಲಕ ಅಭಿಯಂತರರು ಮತ್ತು ಅಧೀಕ್ಷಕ ಅಭಿಯಂತರರನ್ನು ತರಾಟೆಗೆ ತಗೆದುಕೊಂಡ ಸಚಿವರು, ಸದಾ ಲಕ್ಷಾಂತರ ಭಕ್ತರು ಆಗಮಿಸುವ ಬೆಟ್ಟದ ರಸ್ತೆಯ ಗುಂಡಿ ಮುಚ್ಚುವ ಕಾಯ೯ವನ್ನು ಆದ್ಯತೆ ಮೇಲೆ ಪೂಣ೯ಗೊಳಿಸುವಂತೆ ಸೂಚಿಸಿದರು.