ಕನ್ನಡತನದೋಳ್.. Kannada Rajyotsava wish
ಕನ್ನಡವೆಂದರೆ ಅಮ್ಮ; ಹೆತ್ತಮ್ಮಗೆ ಸರಿಸಾಟಿಯುಂಟೇ?
ರೈಲಿಲಿ ಬರುವ ಹಿಂದಿ ಅತ್ತೆಗೆ ಅಂತಃಪುರದೊಳು ಪ್ರವೇಶವುಂಟೇ?
ಕನ್ನಡವೆಂದರೆ ಆತ್ಮ; ರನ್ನದ ಪದಸಾಲು
ಅಚ್ಚ ಸಿಂಗರದ ಸ್ವಚ್ಛ ಸುಂದರತೆಯ ಭಾಷೆಗೆ ಮಿಗಿಲುಂಟೇ? Kannada Rajyotsava wish
ಕನ್ನಡತನವನ್ ತಾಯಿಗೆ ದೇವಿಗೆ ಹೋಲಿಸಿ ಬರೆದವರುಂಟು
ಕನ್ನಡನಾಡಿನ ಗಂಧದ ಘಮವನು ಅಖಂಡ ವಿಶ್ವದಿ ಹರಡಿದವರುಂಟು
ಕನ್ನಡ ಬದುಕೇ ಸತ್ಯ ನಿತ್ಯ ಉಳಿದಿದ್ದು ಹಸಿ ಮಿಥ್ಯ- ಸಂದೇಶ ಸಾರಿದವರುಂಟು
ಆಡಿದ ಪಾಡಿದ ಸುಖಿಸಿದ ಕನವರಿಸಿದ ನುಡಿಗೆ ಅಡಿಗಡಿಗೆ ನಮಿಸಿದವರುಂಟು
ನಾಡು ಉಳಿಯಬೇಕಾದರೆ ಭಾಷೆ ಉಳಿಯಬೇಕು – ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕನ್ನಡ ಬಾಳ್ವೆಯ ಮರೆತಿಹ ಮೂರ್ಖರೇ ನಿಮಗೆ ನರಕ ತಪ್ಪಿದ್ದಲ್ಲ
ನಾಲಿಗೆ ಮೇಲಣ ನಲಿಯುವ ಪದಗಳ ಮೆರವಣಿಗೆಗೆ ತಡೆಯಿಲ್ಲ
ನೂರು ನಾಯಿಗಳು ಒಮ್ಮೆಲೆ ಬೊಗಳಿದರೂ ಒಂದು ಘರ್ಜನೆಗೆ ಸಮನಲ್ಲ
ಕನ್ನಡ ಹೊನ್ನುಡಿಯ ಗಜನಡಿಗೆಗೆ ಇಲ್ಲಿ ಅಡೆತಡೆ ಎಂದೊಂದಿಲ್ಲ
ಧಮನಿ ಧಮನಿಯಲಿ ಉಕ್ಕುಕ್ಕುವ ರುಧಿರ ಪ್ರವಾಹದಲಿ ಬೆರೆತಿಹ ಪದ ಇದೊಂದೆ
ಪದವಿ ಪಟ್ಟಗಳ, ಅಧಿಕಾರ ಹುದ್ದೆಗಳ ಮೀರಿದ ತನವಿದೊಂದೇ
ಕನ್ನಡ ನನ್ನದು ನಮ್ಮದು ಎಂಬುದು ಈ ಬಾಳಿನ ನಿಜ ಪುಣ್ಯಾಂಶ
ಕನ್ನಡ ದೇಶದೊಳ್ ಹುಟ್ಟಿದ ನಾವ್ ಗಳು ಧನ್ಯರೇ ಉಳಿದಿದ್ದೇಲ್ಲಾ ಶೇಷ
ಹಿಂದಿಯ ಹೇರಿ ಮಾಡಿ ಸವಾರಿ ನಮಗದು ಸದಾ ನಗಣ್ಯ
ಚೆನ್ನುಡಿ ಅಪ್ಪಿ ಬೆಳೆವರೆಲ್ಲಾರಿಗೂ ಕನ್ನಡವೇ ಅತಿ ಗಣ್ಯ
ಕಸ್ತೂರಿ ಸಿರಿಗನ್ನಡ ನುಡಿತೇರನು ಕಟ್ಟುವೆವು ಬೆವರ ಹರಿಸಿ
ಲಿಪಿಗಳ ರಾಣಿಗೆ ಕಿರೀಟ ತೊಡಿಸಿ ಕುಣಿಯುವೆವು ಸಂಭ್ರಮ ಆಚರಿಸಿ
-ವಿಭಾ (ವಿಶ್ವಾಸ್ ಭಾರದ್ವಾಜ್)
*
ಕನ್ನಡ ರಾಜ್ಯೋತ್ಸವ ಹಬ್ಬದ ಶುಭಾಶಯಗಳು..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel