Kannada Telivision : ‘ಗಟ್ಟಿಮೇಳ’ ನಟಿ ಜೊತೆಗೆ ‘ಪಾರು’ ನಟನ ನಿಶ್ಚಿತಾರ್ಥ..!!
ಗಟ್ಟಿಮೇಳ ಧಾರವಾಹಿಯ ಮೂಲಕ ಮನೆಮಾತನಾಗಿರುವ ನಟಿ ಪ್ರಿಯಾ ಜೆ ಆಚಾರ್ ಹಾಗೂ ಪಾರು ಧಾರವಾಹಿಯಲ್ಲಿ ಪ್ರೀತಮ್ ಪಾತ್ರದಲ್ಲಿ ಮಿಂಚುತ್ತಿರುವ ನಟ ಸಿದ್ದು ಮೂಲಿಮನೆ ಇದೀಗ ಗೇಜ್ ಆಗಿದ್ದಾರೆ..
ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ನಂತರ ಧಮಾಕ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಇದೀಗ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬ್ಬರಿಗೂ ಅಭಿಮಾನಿಗಳು , ಆಪ್ತರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಇವರಿಬ್ಬರ ನಿಶ್ಚಿತಾರ್ಥದಲ್ಲಿ ಗಟ್ಟಿಮೇಳ , ಪಾರು ಧಾರವಾಹಿಯ ತಂಡದವರೂ ಭಾಗಿಯಾಗಿದ್ದು ವಿಶೇಷ..