ಬೆಂಗಳೂರು : ವಿಧಾನಸಭಾ ಚುನಾವಣೆ (Karnataka Election 2023) ಮತದಾನ ಮುಗಿದಿದ್ದು, ಫಲಿತಾಂಶ ಇನ್ನೇನು ಹೊರ ಬೀಳುತ್ತವೆ ಎನ್ನುವ ಹೊತ್ತಿನಲ್ಲಿಯೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ಸಿಕ್ಕಿದೆ.
ವಿದ್ಯುತ್ ದರ (Electricity Price) ಹೆಚ್ಚಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission) ಆದೇಶ ಹೊರಡಿಸಿದ್ದು, ಪ್ರತಿ ಯೂನಿಟ್ ಗೆ ಸರಾಸರಿ 70 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದ ಅನ್ವಯ ಆಗುವಂತೆ ವಿದ್ಯುತ್ ದರ ಏರಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಥಿಕ ವರ್ಷ 2023-24ನೇ ಸಾಲಿಗೆ ಎಲ್ಲಾ ವಿತರಣಾ ಪರವಾನಿಗೆದಾರರ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಲಾಗಿದೆ ಎಂದು ಆಯೋಗವು ಹೇಳಿದೆ.








