Kantara 2 ಗೆ ಸಿಕ್ಕಿತಂತೆ ಪಂಜುರ್ಲಿ ದೈವದ ಅನುಮತಿ..!!
ರಿಷಬ್ ಶೆಟ್ಟಿ ನಿರ್ದೇಶಿ ನಟಿಸಿರುವ ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಸಕ್ಸಸ್ ಗಳಿಸಿದೆ..
ಸಿನಿಮಾ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ..
ಸಿನಿಮಾದ ಕ್ಲೈಮ್ಯಾಕ್ಸ್ ರೋಚಕ ಹಾಗೂ ಅದ್ಭುತವಾಗಿದ್ದು ,ಕೊನೆಯಲ್ಲಿ ಒಂದು ಕುತೂಹಲವೂ ಇದೆ..
ಹೀಗಾಗಿ ಸಿನಿಮಾದ ಸೀಕ್ವೆಲ್ ಬರುತ್ತಾ ಅನ್ನೋ ಅನುಮಾನ ಹುಟ್ಟುತ್ತೆ.. ಅಲ್ಲದೇ ಕಾಂತಾರ 2 ಬಗ್ಗೆ ರಿಷಬ್ ಶೆಟ್ಟಿ ಕೆಲವೊಮ್ಮೆ ಸುಳಿವನ್ನ ನೀಡಿರುವುದೂ ಉಂಟು..
ಇದೀಗ ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಭಾಗಿಯಾಗಿದ್ದು ಗೊತ್ತಾಗಿದೆ. ಹೀಗಾಗಿ ಕಾಂತಾರ 2 ಬರುವುದು ಪಕ್ಕಾ ಅಂತಲೇ ಹೇಳಲಾಗುತ್ತಿದೆ..
ಅಲ್ದೇ ಕಾಂತಾರ 2 ಗೆ ಪಂಜುರ್ಲಿ ದೈವದ ಅನುಮತಿಯೂ ಸಿಕ್ಕಾಗಿದೆ ಎನ್ನಲಾಗ್ತಿದೆ.. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತರ 2 ಸಿನಿಮಾ ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ.
ಮಧ್ಯರಾತ್ರಿ ನಡೆದ ದೈವದ ಜೊತೆಗಿನ ಮಾತುಕತೆಯಲ್ಲಿ ದೈವ ಹಲವು ಸೂಚನೆಗಳ ಜೊತೆ ಸಿನಿಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ..
ಅಂದ್ಹಾಗೆ ಕಾಂತಾರ ಶುರು ಮಾಡುವುದಕ್ಕೂ ಮೊದಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಳಿ ಸಲಹೆ ಪಡೆದು , ದೈವದ ಬಳಿ ಅನುಮತಿ ಪಡೆದು , ಕಟ್ಟುನಿಟ್ಟಿನ ಷರತ್ತುಗಳನ್ನ ಅನುಸರಿಸಿ ಸಿನಿಮಾ ಮಾಡಿದ್ದರು ರಿಷಬ್ ಶೆಟ್ಟಿ..