Kantara ಮೆಚ್ಚಿದ ರಜನಿ; ತಲೈವ ಆಶಿರ್ವಾದ ಪಡೆದ ರಿಷಬ್ ಶೆಟ್ಟಿ..
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವನ್ನ ಹೊಗಳದವರೇ ಇಲ್ಲವೇನೋ ಎನಿಸುತ್ತಿದೆ. ಚಿತ್ರ ನೋಡಿದ ಯಾರೋ ಆದರೂ ರಿಷಬ್ ಅಭಿನಯಕ್ಕೆ ಮನಸೋಲಲೇ ಬೇಕು. ಇದಕ್ಕೆ ಭಾರತದ ಖ್ಯಾತ ನಟ ರಜನಿಕಾಂತ್ ಸಹ ಹೊರತಲ್ಲ.
ನಟ ರಜನಿಕಾಂತ್ ಇತ್ತೀಚೆಗಷ್ಟೆ ಕಾಂತಾರ ಚಿತ್ರ ನೋಡಿ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ಅವರು ಖುದ್ದು ರಜನಿಕಾಂತ್ ಮನೆ ತಲುಪಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಈ ಪೋಟೋ ಗಳು ಇದೀಗ ಸೋಶಿಯಲ್ ನ ಮಿಡಿಯಾಗಳಲ್ಲಿ ವೈರಲ್ ಆಗಿವೆ.
https://twitter.com/shetty_rishab/status/1586069437588770816
ಪೋಟೋ ಗಳಲ್ಲಿ ರಿಷಬ್ ಶೆಟ್ಟಿ ರಜನಿಕಾಂತ್ ಅವರ ಆಶಿರ್ವಾದ ಪಡೆದು, ಶಾಲು ಹೊದಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿರುವ ಪೊಟೋ ಗಳನ್ನ ನೋಡಬಹುದು. ನೀವು ಒಂದ ಸಲ ಹೊಗಳಿದ್ರೆ ನಮಗೆ ನೂರು ಸಲ ಹೊಗಳಿದಂಗೆ ಕಾಂತಾರ ಚಿತ್ರ ನೋಡಿ ಮೆಚ್ಚಿಕೊಂಡಿದ್ದಕ್ಕೆ ಅಭಾರಿಗಳು ನಾವು ಎಂದು ರಿಷಬ್ ಶೆಟ್ಟಿ ಟ್ವಿಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ…
Kantara admired Rajini; Rishabh Shetty blessed by Thalaiva..