Kantara ಸಿನಿಮಾ ಪೋಸ್ಟರ್ ಮೇಲೆ ಅವಹೇಳನ ಬರಹ…
ಈ ವರ್ಷದ ಹಿಟ್ ಸಿನಿಮಾಗಳಲ್ಲಿ ಸೆಪ್ಟೆಂಬರ್ 30 ರಂದು ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.. ರಿಷಬ್ ಶೆಟ್ಟಿ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ..
ಆದ್ರೆ ಶಿವಮೊಗ್ಗದಲ್ಲಿ ಗೋಡೆಗಳ ಮೇಲೆ ಹಾಕಿದ್ದ ಕಾಂತಾರ ಪೋಸ್ಟರ್ ಮೇಲೆ ಕೆಲ ವಿಕೃತ ಮನಸ್ಸಿನ ಕಿಡಿಗೇಡಿಗಳು ದೇವರ ಬಗ್ಗೆ ಕೆಟ್ಟದಾಗಿ ಬರೆದು ಅವಹೇಳನ ಮಾಡಿದ್ದು ಈ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದೆ.. ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ಬಹಳ ಕೆಟ್ಟದಾಗಿ ಬರೆಯಲಾಗಿದೆ.. ಅದನ್ನ ಹೇಳುವುದಕ್ಕೂ ಆಗದಷ್ಟು ಕೆಟ್ಟದಾಗಿ ಬರೆದಿದ್ದಾರೆ.. ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಭೇಟಿ ಪರಿಶೀಲನೆ ನೀಡಿ ಅವಹೇಳನಕಾರಿ ಬರಹವನ್ನ ತಕ್ಷಣವೇ ತೆಗೆಸಿದ್ದಾರೆ.
Kantara: Derogatory writing on Kantara movie poster…