kantara | ಕಾಂತಾರ ಕಲೆಕ್ಷನ್ ಸುನಾಮಿ.. ಸಿನಿಮಾದ ಬಜೆಟ್ ಎಷ್ಟು ಗೊತ್ತಾ ?
ಕರ್ನಾಟಕದಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾ ಎಲ್ಲರ ಮೆಚ್ಚುಗೆ ಪಡೆದುಕೊಂಡು ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಕೂಡ ಡಬ್ ಆಗಿದೆ.
ಡಬ್ ಆಗಿ ರಿಲೀಸ್ ಆಗಿರುವ ಎಲ್ಲಾ ಭಾಷೆಗಳಲ್ಲಿ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಶನಿವಾರ ಅಂದ್ರೆ ಅಕ್ಟೋಬರ್ 15 ರಂದು ತೆಲುಗು ಭಾಷೆಯಲ್ಲಿ ಕಾಂತಾರ ಸಿನಿಮಾ ರಿಲೀಸ್ ಆಯ್ತು.
ಫಸ್ಟ್ ಶೋನಿಂದಲೇ ಪಾಸಿಟಿವ್ ಟಾಕ್ ನೊಂದಿಗೆ ಕಾಂತಾರ ಮುನ್ನುಗ್ಗುತ್ತಿದೆ.
ಮೊದಲ ದಿನವೇ ಸಿನಿಮಾಗೆ ಪಾಸಿಟಿವ್ ಟಾಕ್ ಬಂದ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ.
ಮೊದಲ ದಿನವೇ ಕಾಂತಾರ ಸಿನಿಮಾ ಐದು ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಕಾಂತಾರ ಸಿನಿಮಾಗೆ ತೆಲುಗಿನಲ್ಲಿ 2 ಕೋಟಿ ಥಿಯೇಟರ್ ಬಿಜಿನೆಸ್ ಆಗಿದೆಯಂತೆ.
ಹಾಗೇ ನೋಡಿದರೆ ಕಾಂತಾರ ಸಿನಿಮಾ ಮೊದಲ ಸಿನಿಮಾ ಲಾಭ ಗಳಿಸಿದೆ.
ಇನ್ನು ಪ್ರಪಂಚದಾದ್ಯಂತ ಕಾಂತಾರ ಸಿನಿಮಾ 114 ಕೋಟಿ ಶೇರ್ ಗಳಿಸಿದೆಯಂತೆ.
ಸದ್ಯ ಥಿಯೇಟರ್ ಅಂಗಳದಲ್ಲಿರುವ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗುತ್ತಿದೆ.
ಈ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿದ್ರೆ ಈ ಸಿನಿಮಾಗೆ ಭಾರಿ ಖರ್ಚಾಗಿದೆ ಅಂತಾ ಅನಿಸುತ್ತದೆ.
ಆದ್ರೆ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಕೇವಲ 16 ಕೋಟಿ ರುಪಾಯಿಗಳಲ್ಲಿ ನಿರ್ಮಿಸಿದ್ದಾರಂತೆ.
ಸದ್ಯ ಟ್ರೆಂಡ್ ನೋಡುತ್ತಿದ್ದರೇ ಕಾಂತಾರ ಸಿನಿಮಾ ಕೇವಲ ತೆಲುಗು ಅವತರಣಿಯಲ್ಲಿಯೇ 16 ಕೋಟಿಗೂ ಹೆಚ್ಚು ಗಳಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.