Kantara : ಕಾಂತಾರ ಎದುರು ನಿಲ್ಲದ ರಶ್ಮಿಕಾ ”ಗುಡ್ ಬೈ”
ಕಥೆ ಮತ್ತು ಚಿತ್ರಕಥೆ ಉತ್ತಮವಾಗಿದ್ದಾರೆ ಗಡಿ ದಾಟಿಯೂ ದಾಖಲೆ ಬರೆಯಬಹುದು ಎನ್ನುವುದಕ್ಕೆ ಕಾಂತಾರ ಉದಾಹರಣೆ, ಸ್ಯಾಂಡಲ್ ವುಡ್ ನಿಂದ ಶುರುವಾದ ಈ ಅಲೆ ಇದೀಗ ಭಾರತದಾದ್ಯಂತ ಆವರಿಸಿದೆ.
ಕರಾವಳಿ ಸಂಸ್ಕೃತಿ ಕಥಾ ಹಂದರಕ್ಕೆ ಜನ ಥ್ರಿಲ್ ಆಗಿದ್ದಾರೆ.. ಹಿಂದಿಯ ಸಿನಿಮಾಗಳನ್ನ ಮೀರಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ಭಾರಿಗೆ ಬಾಲಿವುಡ್ ನಲ್ಲಿ ನಟಿಸುತ್ತಿರುವ ರಶ್ಮಿಕಾ ಮತ್ತು ಬಿಗ್ ಬಿ ಸಿನಿಮವನ್ನೂ ಕಾಂತಾರ ಹಿಂದಿಕ್ಕಿದೆ.
ಹಿಂದಿ ವರ್ಷನ್ ನಲ್ಲಿ ಕಾಂತಾರ 9.27 ಕೋಟಿ ರೂಪಾಯಿ ಗಳಿಸಿದ್ದರೆ , ರಶ್ಮಿಕಾ ನಟನೆಯ ಚೊಚ್ಚಲ ಸಿನಿಮಾ ಗುಡ್ ಬೈ 11 ದಿನಗಳಲ್ಲಿ ಕೇವಲ 8 ಕೋಟಿ ಕಲೆಕ್ಷನ್ ಮಾಡಿದೆ.. ಅದು ಸಹ ಮೂಲ ಹಿಂದಿಯಲ್ಲೇ ರಿಲೀಸ್ ಆಗಿರುವ ಸಿನಿಮಾ ಇಷ್ಟು ಕಳಪೆ ಕಲೆಕ್ಷನ್ ಮಾಡಿ ಡಿಸಾಸ್ಟರ್ ಸಾಬೀತಾಗಿದೆ.. ಅಲ್ಲದೇ ಬಾಲಿವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ರಶ್ಮಿಕಾಗೆ ಹೀನಾಯ ಸೋಲಾಗಿದ್ದು , ಗೋಲ್ಡನ್ ಗರ್ಲ್ ಗೆ ಬಾಲಿವುಡ್ ನಲ್ಲಿ ಮುಂದೆ ಸಕ್ಸಸ್ ಸಿಗುತ್ತಾ ಎಂಬ ಅನುಮಾನಗಳು ಆರಂಭವಾಗಿದೆ..
ಗುಡ್ ಬೈ ಚಿತ್ರ ಬುಕ್ ಮೈ ಶೋ ನಲ್ಲೂ ಕಾಂತಾರ ಮುಂದೆ ಮಕಾಡೆ ಮಲಗಿದ್ದು , ಒಟ್ನಲ್ಲಿ ಮೊದಲ ಸಿನಿಮಾದಲ್ಲೇ ರಶ್ಮಿಕಾಗೆ ಹಿನ್ನಡೆಯುಂಟಾಗಿದೆ.
Kantara stand against rashmika good bye movie