Kantara ಗೆ ಮೊದಲ ಯಶಸ್ಸು, ‘ವರಾಹ ರೂಪಂ’ ಹಾಡಿನ ತಡೆಯಾಜ್ಞೆ ರದ್ದು..!!
ಕೋರ್ಟಿಗೆ ಹೋಗ್ತಿ… ಆಂದ್ರೆ ಮೆಟ್ಟಿಲ ಮೇಲೆ ತೀರ್ಮಾನ ನಾನ್ ಮಾಡ್ತೇನೆ… ಕಾಂತಾರ ಚಿತ್ರದಲ್ಲಿ ದೈವ ನುಡಿಯುವಂತಹ ತೀರ್ಪು ನಿಜ ಜೀವನದಲ್ಲೂ ಸತ್ಯವಾಗಿದೆ.
ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆಗೆ ಮೊದಲ ಜಯ ದೊರಕಿದೆ. ಹಾಡಿನ ಮೇಲಿನ ತಡೆಯಾಜ್ಞೆಯನ್ನ ಕೇರಳದ ಹೈಕೋರ್ಟ ರದ್ದು ಮಾಡಿದೆ.
ಕಾಂತಾರ ಚಿತ್ರದ ವರಾಹ ರೂಪಂ ಹಾಡು ಮಲಯಾಳಂನ ಆಲ್ಬಂ ಸಾಂಗ್ ಥೈಕುಡಂ ಬ್ರಿಡ್ಜ್ ನ ನವರಸಂ ಟ್ಯೂನ್ ನಿಂದ ಕದ್ದದ್ದು ಎಂದು ದೂರ ನೀಡಿದ್ದ ನಂತರ ಕೇರಳದ ಜಿಲ್ಲಾ ನ್ಯಾಯಾಲಯ ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ನಂತರ ಹಾಡನ್ನ ಯೂಟ್ಯೂಬ್ ನಿಂದಲೂ ಡಿಲೀಟ್ ಮಾಡಲಾಗಿತ್ತು.
ಚಿತ್ರ ಒಟಿಟಿಯಲ್ಲಿ ತೆರೆಕಂಡ ಮೇಲೆ ವರಾಹ ರೂಂ ಟ್ಯೂನ್ ಬದಲಾಗಿತ್ತು. ಆದ್ರೆ ಒರಿಜಿನಲ್ ಟ್ಯೂನ್ ನ್ನೇ ಸಿನಿ ಪ್ರೇಮಿಗಳು ಇಷ್ಟಪಡ್ತಿದ್ರು,
ಇದೀಗ ಕೊನೆಗೂ ಕಾಂತಾರ ಸಿನಿಮಾತಂಡಕ್ಕೆ ಜಯ ಸಿಕ್ಕಿದೆ.. ಈ ಹಿಂದಿನಂತೆಯೇ ವರಾಹರೂಪಂ ಹಾಡು ಬಳಕೆಗೆ ಅನುಮತಿ ಸಿಕ್ಕಿದೆ. ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
Kantara’s first success, ‘Varaha Rupam’ song ban lifted..!!