Kapil Dev ಟೀಂ ಇಂಡಿಯಾ ಬಗ್ಗೆ ಕಪಿಲ್ ಗಿಲ್ಲ ನಂಬಿಕೆ
ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಫೇವರೇಟ್ ಆಗಿ ಅಖಾಡಕ್ಕೆ ಧುಮುಕಿದೆ.
ಕಳೆದ ವರ್ಷ ಘೋರ ವೈಫಲ್ಯ ಕಂಡ ಟೀಂ ಇಂಡಿಯಾ ಸೂಪರ್ 12 ಹಂತದಿಂದಲೇ ಟೂರ್ನಿಯಿಂದ ಹೊರಬಿತ್ತು.
ಟೀಂ ಇಂಡಿಯಾ ಈ ಬಾರಿ ಪಾಕ್ ವಿರುದ್ಧದ ಪಂದ್ಯದೊಂದಿಗೆ ಚುಟುಕು ವಿಶ್ವಸಮರವನ್ನು ಆರಂಭಿಸಲಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಟೀಂ ಇಂಡಿಯಾ ಬಗ್ಗೆ ಮಾತನಾಡಿದ್ದು, ಭಾರತ ಕ್ರಿಕೆಟ್ ತಂಡ ಸೆಮಿ ಫೈನಲ್ ಸೇರುವ ಅವಕಾಶ ಶೇಕಡಾ 30 ರಷ್ಟು ಮಾತ್ರ ಇದೆ ಎಂದಿದ್ದಾರೆ.
ಟಿ 20 ಕ್ರಿಕೆಟ್ ನಲ್ಲಿ ಒಂದು ಮ್ಯಾಚ್ ಗೆದ್ದರೇ ಮತ್ತೊಂದು ಮ್ಯಾಚ್ ನಲ್ಲಿ ಸೋಲು ಕಾಣಬಹುದು.
ಇಂಡಿಯಾ ವರ್ಲ್ಡ್ ಕಪ್ ಗೆಲ್ಲುವ ಅವಕಾಶಗಳ ಬಗ್ಗೆ ಮಾತನಾಡುವುದು ತುಂಬಾ ಕಷ್ಟ.
ಅಸಲಿಗೆ ಟೀಂ ಇಂಡಿಯಾ ಈ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಸೇರುವ ಅವಕಾಶಗಳು ಕಡಿಮೆ ಇವೆ.
ನಾನು ಇದರ ಬಗ್ಗೆ ಯೋಜನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಟಾಪ್ ನಾಲ್ಕರ ಹಂತಕ್ಕೆ ಹೋಗುವ ಅವಕಾಶಗಳು ಕೇವಲ ಶೇಕಡಾ 30ರಷ್ಟು ಇದೆ ಎಂದು ಕಪಿಲ್ ಹೇಳಿದ್ದಾರೆ.
ತಂಡದಲ್ಲಿ ಆಲ್ ರೌಂಡರ್ ಗಳಿದ್ದರೇ ಯಾವುದೇ ತಂಡ ಬಲಿಷ್ಠವಾಗಿರುತ್ತದೆ.
ಹಾರ್ದಿಕ್ ಪಾಂಡ್ಯರಂತಹ ಪ್ಲೇಯರ್ ಟೀಂ ಇಂಡಿಯಾದ ಪ್ಲಸ್ ಪಾಯಿಂಟ್.
ಯಾವುದೇ ತಂಡವಾಗಿದ್ದರೂ ಆಲ್ ರೌಂಡರ್ ಗಳು ಪ್ರಮುಖ ಪಾತ್ರವಹಿಸುತ್ತಾರೆ.
ಅವರೇ ತಂಡದ ಬಲವಾಗಿತ್ತಾರೆ. ಹಾರ್ದಿಕ್ ಪಾಂಡ್ಯ ಒಳ್ಳೆಯ ಬ್ಯಾಟರ್, ಬೌಲರ್, ಫೀಲ್ಡರ್ ಎಂದು ಕಪಿಲ್ ಹೇಳಿದ್ದಾರೆ.
ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ ಅಫ್ ಬಗ್ಗೆ ಮಾತನಾಡಿದ ಕಪಿಲ್ ದೇವ್, ನಿಜ ಹೇಳಬೇಕೆಂದರೇ ಸೂರ್ಯ ಕುಮಾರ್ ಯಾದವ್ ಇಷ್ಟು ಪ್ರಭಾವ ಬೀರುತ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ.
ಆದ್ರೆ ಸೂರ್ಯ ಬ್ಯಾಟಿಂಗ್ ನಲ್ಲಿ ಎಷ್ಟೋ ಅದ್ಭುತವಾಗಿ ಮಿಂಚುತ್ತಿದ್ದು, ವಿಶ್ವ ಕ್ರಿಕೆಟ್ ಆತನ ಬಗ್ಗೆ ಮಾತನಾಡುವಂತೆ ಮಾಡುತ್ತಿದ್ದಾರೆ.
ಆತನಿಲ್ಲದ ಟೀಂ ಇಂಡಿಯಾವನ್ನು ನಾವು ಊಹೆ ಮಾಡಲು ಸಾಧ್ಯವಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.