ಕಾಂಗ್ರೆಸ್ ಜನರ ಆಯ್ಕೆಯಲ್ಲ : `ಕೈ’ ನಾಯಕತ್ವದ ವಿರುದ್ಧ ಕಪಿಲ್ ಕಿಡಿ
ನವದೆಹಲಿ : ಕಾಂಗ್ರೆಸ್ ಪಕ್ಷದ ನಾಯಕತ್ವದ ವಿಚಾರವಾಗಿ ಪಕ್ಷದ ನಾಯಕರು ಪದೇ ಪದೇ ಧ್ವನಿ ಎತ್ತುತ್ತಲೇ ಇದ್ದಾರೆ.
ಇದರ ಮುಂದವರಿದ ಭಾಗವಾಗಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಿಲ್ ಮತ್ತೆ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಮತ್ತು ಹಲವು ರಾಜ್ಯಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕಳಪೆ ಪ್ರದರ್ಶನ ನೀಡಿದೆ.
ಈ ಬಗ್ಗೆ ‘ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತ ಕಪಿಲ್, ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕಾಂಗ್ರೆಸ್ ಪಕ್ಷವು ಜನರ ಆಯ್ಕೆ ಅಲ್ಲ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಪರ್ಯಾಯ ರಾಜಕೀಯ ಶಕ್ತಿಯೆಂದು ಮತದಾರರು ಸ್ವೀಕರಿಸುತ್ತಿಲ್ಲ.
ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂದು ಗುಂಪುಗಾರಿಕೆ ಮಾಡಲ್ಲ : ಸೋಮಶೇಖರ್ ರೆಡ್ಡಿ
ಇದಕ್ಕೆ ಬಿಹಾರ ಮತ್ತು ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳೇ ಸಾಕ್ಷಿ’ ಎಂದು ಕಪಿಲ್ ಸಿಬಲ್ ಕಿಡಿಕಾರಿದ್ದಾರೆ.
ಅಲ್ಲದೆ ಪಕ್ಷದ ನಾಯಕತ್ವ ವಿಚಾರವಾಗಿ ‘ಈ ಹಿಂದೆ ಕೆಲವರು ಸೇರಿ ಪತ್ರ ಬರೆದಿದ್ದೆವು. ಕಾಂಗ್ರೆಸ್ ಮುಂದೇನು ಮಾಡಬೇಕೆಂದು ನಾಯಕತ್ವಕ್ಕೆ ತಿಳಿಸಲು ಪ್ರಯತ್ನಿಸಿದ್ದೆವು.
ಆದರೆ, ಅವರು ನಮಗೆ ಬೆನ್ನು ತೋರಿಸಿದರು. ಅದರ ಫಲಿತಾಂಶ ನಮ್ಮ ಮುಂದಿದೆ’ ಎಂದು ಕಪಿಲ್ ಸಿಬಲ್ ಪಕ್ಷದ ನಾಯಕತ್ವದ ವಿರುದ್ಧ ಮತ್ತೆ ಧ್ವನಿ ಎತ್ತಿದ್ದಾರೆ.
ಅಧಿಕಾರ ದುರುಪಯೋಗ ವಿಷಯದಲ್ಲಿ ಕಾಂಗ್ರೆಸ್ ನಂಬರ್ ಒನ್ : ಸಿ.ಟಿ.ರವಿ
ಪಕ್ಷದ ನಾಯಕತ್ವ ಬದಲಾವಣೆ ಕೋರಿ 23 ಹಿರಿಯ ಕಾಂಗ್ರೆಸ್ ಮುಖಂಡರು ಕೆಲ ತಿಂಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್‍ನ ಹಿರಿಯ ಮುಖಂಡರ ಪತ್ರದ ವಿಚಾರವಾಗಿ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel