ಕನ್ನಡ ಬಾವುಟ ಸುಟ್ಟವರನ್ನು ಬಂಧಿಸುವಂತೆ ಕರವೇ ಪ್ರತಿಭಟನೆ Kannada flag saaksha tv
ಚಾಮರಾಜನಗರ : ಕನ್ನಡ ಬಾವುಟವನ್ನು ಸುಟ್ಟುಹಾಕಿದ ಮಹಾರಾಷ್ಟ್ರದ ಎಂ.ಇ.ಇಸ್ ಕಾರ್ಯಕರ್ತರನ್ನು ಬಂಧಿಸುವಂತೆ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಎಂ.ಇ.ಎಸ್ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡ ಧ್ವಜವನ್ನು ಸುಟ್ಟಿರುವವರನ್ನು ಬಂಧಿಸಿ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು.
ರಾಜ್ಯದಲ್ಲಿ ಬಂಧನಕ್ಕೆ ಒಳಗಾಗಿರುವ ಕನ್ನಡ ಪರ ಹೋರಾಟಗಾರರನ್ನು ಮುಖ್ಯಮಂತ್ರಿಗಳು ಯಾವುದೇ ಕೇಸ್ ದಾಖಲಾಗದಂತೆ ಕ್ರಮವಹಿಸಿ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಸ್.ಮಹೇಶ್, ಶಿವಮಲ್ಲಪ್ಪ, ಸಿ.ಎನ್.ರುದ್ರ, ನಾಗೇಶ್.ಎಂ, ಪುರುಷೋತ್ತಮ್, ಪ್ರಕಾಶ್.ಎಂ, ಶಿವಮೂರ್ತಿ, ಮಹೇಶ್.ಕೆ, ಇತರರು ಭಾಗವಹಿಸಿದ್ದರು.