ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ… ಅವರಷ್ಟೇ ಫೇಮಸ್ ಅವರ ಮಕ್ಕಳು.. ಮಕ್ಕಳಾದ ತೈಮೂರ್ ಮತ್ತು ಜೆಹ್ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ..
ಅಂದ್ಹಾಗೆ ಸೈಫ್ ಗೆ ಒಟ್ಟು ನಾಲ್ಕು ಮಂದಿ ಮಕ್ಕಳಿದ್ದಾರೆ.. ಮೊದಲ ಪತ್ನಿ ಅಮೃತಾ ಹಾಗೂ ಸೈಫ್ ದಂಪತಿಗೆ ಓರ್ವ ಮಗ ಹಾಗೂ ಮಗಳಿದ್ದು , ಮಗಳು ಸಾರಾ ಬಾಲಿವುಡ್ ನಲ್ಲಿ ಪ್ರಸ್ತುತ ಬಹುಬೇಡಿಕೆಯ ನಟಿಯಾಗಿದ್ದಾರೆ.
ಈ ನಡುವೆ ಕರೀನಾ ಕಪೂರ್ ಮತ್ತೆ ಗರ್ಭಿಣಿ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.. ನಟಿ ಕರೀನಾ ಕಪೂರ್ ಖಾನ್ ಅವರು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ವದಂತಿಗೆ ಈಗ ಸ್ಪಷ್ಟನೆ ನೀಡಿರುವ ಬೇಬೋ ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ಧಾರೆ,..
ಅವರು ಮತ್ತೆ ಪ್ರೆಗ್ನೆಂಟ್ ಎಂಬ ಅನುಮಾನ ಶುರುವಾಗೋದಕ್ಕೆ ಕಾರಣ ಅವರ ಫೋಟೋ,. ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ವೆಕೇಶನ್ ನಲ್ಲಿರೋ ಫೋಟೋಗಳು ವೈರಲ್ ಆಗಿವೆ..
ಈ ಫೋಟೋಗಳಲ್ಲಿ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣಿಸಿದೆ.. ಇದಕ್ಕೆ ನೆಟ್ಟಿಗರು ಗರ್ಭದಾರಣೆ ವದಂತಿ ಹಬ್ಬಿಸಿದ್ದಾರೆ.. ಆದ್ರೆ ಇದು ತನ್ನ ರಜೆಯ ಸಮಯದಲ್ಲಿ ತಾನು ಹೊಂದಿರುವ ಎಲ್ಲಾ ಪಾಸ್ತಾಗಳು ಮತ್ತು ವೈನ್ ಫಲಿತಾಂಶ ಎಂದು ಕರೀನಾ ಸ್ಪಷ್ಟ ಪಡೆಸಿದ್ದಾರೆ..
ಇದು ಪಾಸ್ಟಾ ಮತ್ತು ವೈನ್ ಗಯ್ಸ್… ಶಾಂತವಾಗಿರಿ… ನಾನು ಗರ್ಭಿಣಿಯಲ್ಲ.. ಉಫ್…. ಸೈಫ್ ಅವರು ಈಗಾಗಲೇ ನಮ್ಮ ದೇಶದ ಜನಸಂಖ್ಯೆಗೆ ತುಂಬಾ ಕೊಡುಗೆ ನೀಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ..
ಇದನ್ನೂ ಓದಿ : RC15 | ಹೊಸ ಅವತಾರದಲ್ಲಿ ರಾಮ್ ಚರಣ್








