40 ಸಾವಿರದ ಗುಸ್ಸಿ ಟೀ ಶರ್ಟ್ ಧರಿಸಿ ಟ್ರೋಲ್ ಗೆ ತುತ್ತಾದ ಕರೀನಾ…
ಬಾಲಿವುಡ್ ನ ಬೇಬೋ … ಗ್ಲಾಮರಸ್ ಬೆಡಗಿ.. ಕರೀನಾ ಕಪೂರ್ ಇಬ್ಬರು ಮಕ್ಕಳ ತಾಯಿಯಾದ್ರೂ ಫಿಟ್ ನೆಸ್ ವಿಚಾರದಲ್ಲಿ ಯುವ ನಟಿಯರನ್ನೂ ನಾಚಿಸುವಂತಹ ಕರೀನಾ ಆಗಾಗ ತನ್ನ ವಸ್ತ್ರ ವಿನ್ಯಾಸದಿಂದಾಗಿ ಆಗಾಗ ಸಾಕಷ್ಟು ಟ್ರೋಲ್ ಆಗೋದೂ ಉಂಟು..
ಇತ್ತೀಚೆಗೆ ಕರೀನಾ ತುಂಬಾ ಸಿಂಪಲ್ ಆಗಿರೋ ಟಿ ಶರ್ಟ್ ಒಂದನ್ನ ಧರಿಸಿದ್ದರು.. ಈ ಹಳದಿ ಬಣ್ಣದ ಟೀ ಶರ್ಟ್ ತುಂಬಾ ಸಿಂಪಲ್ ಆಗಿದೆ… ಏನಂದ್ರೆ ಈ ಟಿ ಶರ್ಟ್ ಗುಸ್ಸಿ ಬ್ರ್ಯಾಂಡ್ ನದ್ದು ಅನ್ನೋದೇ ದೊಡ್ಡ ವಿಚಾರವಷ್ಟೇ…
ಆದ್ರೆ ಇಷ್ಟು ಸಿಂಪಲ್ ಶರ್ಟ್ ನ ಮೌಲ್ಯ ಕೇಳಿದ್ರೆ ಎಲ್ಲರೂ ಹೌಹಾರೋದು ಗ್ಯಾರಂಟಿ.. ಇಷ್ಟು ಸಿಂಪಲ್ ಶರ್ಟ್ ಗೆ ಅಷ್ಟು ದುಬಾರಿ ಮೊತ್ತ ಕೊಡೋ ಅವಶ್ಯಕತೆ ಇತ್ತಾ ಅನ್ನೋದಷ್ಟೇ ನೆಟ್ಟಿಗರ ಪ್ರಶ್ನೆ.. ಹೀಗಾಗಿಯೇ ಕರೀನಾರನ್ನ ಟ್ರೋಲ್ ಮಾಡ್ತಿರೋದು..
ಈ ಶರ್ಟ್ ನ ಮೌಲ್ಯ ಬರೋಬ್ಬರಿ 40 ಸಾವಿರ ರೂಪಾಯಿಗಳಂದ್ರೆ ನೀವು ನಂಬಲೇ ಬೇಕು…!! ಶಾಕ್ ಆಗಲೇ ಬೇಕು..!!!
https://www.instagram.com/p/CeeHYvcjwX8/?utm_source=ig_embed&utm_campaign=embed_video_watch_again
ಹಳದಿ ಬಣ್ಣದ ಗುಚ್ಚಿ ಟಿ-ಶರ್ಟ್ ತೊಟ್ಟು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಫ್ಲ್ಯಾಟ್ ಶೂ ಹಾಗೂ ಕಪ್ಪು ಬಣ್ಣದ ಸನ್ ಗ್ಲಾಸ್ ತೊಟ್ಟು ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಧರಿಸಿದ್ದ ಟಿ-ಶರ್ಟ್ ಅನ್ನು ಟಾರ್ಗೆಟ್ ಮಾಡಿ ನೆಟ್ಟಿಗರು ಹಿಗ್ಗಾ ಮುಗ್ಗಾ ಟ್ರೋಲ್ ಮಾಡ್ತಾಯಿದ್ದಾರೆ. ನಮ್ಮಲ್ಲಿ ಇದೇ ಟಿ-ಶರ್ಟ್ 200 ರುಪಾಯಿಗೆ ಸಿಗುತ್ತದೆ ಎಂದು ಹಲವರು ಕರೀನಾರನ್ನು ಟ್ರೋಲ್ ಮಾಡಿದ್ದಾರೆ.
ಅಂದ್ಹಾಗೆ ಸಿನಿಮಾಗಳ ಬಗ್ಗೆ ಮಾತನಾಡೋದಾದ್ರೆ ಕರೀನಾ ಕಪೂರ್ ಹಾಗೂ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾ ರಿಲೀಸ್ ಆಗಬೇಕಿದೆ.. ನಂತರ ವೀರ್ ದಿ ವೆಡ್ಡಿಂಗ್ 2 , ತಕ್ತ್ ಸಿನಿಮಾಗಳಲ್ಲಿ ಕರೀನಾ ನಟಿಸಲಿದ್ದಾರೆ. ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ 2 ಸಿನಿಮಾದಲ್ಲಿಯೂ ಕರೀನಾ ನಟಿಸಲಿದ್ದಾರೆ ಎನ್ನಲಾಗಿದೆ..