ಲೆಫ್ಟಿನೆಂಟ್ ಕಿಶಿಂಗ್ ಕ್ಲಿಪೊರ್ಡ್ ನೋನಗೃಮ್ – Saaksha Tv
ಅದು 1999 ಇಡಿ ಕಾಶ್ಮೀರ ರಕ್ತದ ಓಕುಳಿಯನ್ನು ಕಂಡ ವರ್ಷ. ಸ್ವರ್ಗದಂತಿದ್ದ ಕಾಶ್ಮೀರವನ್ನು ನರಕದಂತಾಗಿಸಿದ ವರ್ಷ.! ಕಾಶ್ಮೀರದ ಪ್ರಮುಖ ಕಣಿವೆಗಳಾದ ಕಾರ್ಗಿಲ್, ದ್ರಾಸ್, ಪೂಂಚ್,ಬಟಾಲಿಕ್,ಜೋಜಿಲ್ಲಾ ಪಾಸ್, ಬಜರಂಗ ಪೋಸ್ಟ್ ದಂತಹ ಎತ್ತರವಾದ ಬೆಟ್ಟದ ಮೇಲೆ ಪಾಕಿಸ್ತಾನಿ ಸೈನಿಕರು ಬಂದು ಕೂತು, ನಮ್ಮ ಸೈನಿಕರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ, ನಮ್ಮದೆ ಮದ್ದು ಗುಂಡು ಬಳಸಿ. ಇದಕ್ಕೆ ತಕ್ಕ ಉತ್ತರ ನಮ್ಮ ಸೇನೆ ನೀಡುತ್ತೆ, ಯುದ್ಧ ಗೆಲ್ಲುತ್ತೆ. ಜಗತ್ತಿಗೆ ಯುದ್ಧ ಪಾಠವಾದ ಈ ಯುದ್ಧದಲ್ಲಿ ಸಾಕಷ್ಟು ತರುಣ ಯೋಧರು ಅಸುನೀಗಿದರು. ಹಂತವರಲ್ಲಿ ಒಬ್ಬರು ನಮ್ಮ ಇಂದಿನ ಕಥಾನಾಯಕ
ಲೆಫ್ಟಿನೆಂಟ್ ಕಿಶಿಂಗ್ ಕ್ಲಿಪೊರ್ಡ್ ನೋನಗೃಮ್ ಹೆಸರು ಉಚ್ಚರಿಸಲು ಸ್ವಲ್ಪ ಕಷ್ಟವಾದರು ಇವರ ವಿಜಯ ಸಾಹಸ ಕಥೆ ಕೇಳಿದರೆ ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ, ಅಂತಹ ನವತರುಣನ ಯಶೋಗಾಥೆ ಈ ಕಥೆ. ಇವರು ಹುಟ್ಟಿದ್ದು 7ಮಾರ್ಚ 1977 ಮೇಘಾಲಯದ ಶಿಲೋಲಂಗ್ ನಲ್ಲಿ. ಇವರು ತಮ್ಮ ಸೇನಾ ತರಬೇತಿಯನ್ನು ಪಡೆದ ನಂತರ ಜಮ್ಮು ಮತ್ತು ಕಾಶ್ಮೀರ Light infantry 12ನೇ
ಬಟಾಲಿಯನ್ ಗೆ ಸೇರುತ್ತಾರೆ. ನವತರುಣ ಸ್ಪುರದ್ರೂಪಿ ಕಿಶಿಂಗ್ ತಮ್ಮ 22ನೇ ವಯಸ್ಸಿನಲ್ಲಿ, 1997ರಲ್ಲಿ ಭಾರತೀಯ ಸೇನೆಯನ್ನು ಸೇರುತ್ತಾರೆ. ಬಿಸಿರಕ್ತದ ತರುಣ, ಶತೃಗಳ ಎದೆ ಬಗೆಯುವ ದೈರ್ಯ ಮತ್ತು ಇವರೊಬ್ಬರೆ ಒಂದು ಸೈನ್ಯದಂತೆ. ಇವರು ಸೈನ್ಯಕ್ಕೆ ಸೇರಿದ ಎರಡೆ ವರ್ಷದಲ್ಲಿ ಯುದ್ಧ ಘೋಷಣೆಯಾಗುತ್ತದೆ, ಅದೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಆಪರೇಷನ್ ವಿಜಯ.

ಇವರು ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದ ನಂತರ ಯುದ್ಧ ಘೋಷಣೆಯಾಗುತ್ತದೆ ಈ ಯುದ್ಧದಲ್ಲಿ ಇವರಿಗೆ ಪಾಯಿಂಟ್ 4812 ಬಟಾಲಿಕ್ ಬೆಟ್ಟವನ್ನು ಪಾಕಿಸ್ತಾನಿ ಕೈಗಳಿಂದ ಮುಕ್ತಗೊಳಿಸುವಂತೆ ಸೇನೆ ಟಾಸ್ಕ್ ನೀಡುತ್ತದೆ. ಪರಮವೀರ ಕಿಶಿಂಗ್ ತಮ್ಮ ಬಟಾಲಿಯನ್ ತೆಗೆದುಕೊಂಡು ಆಗ್ನೇಯ ದಿಕ್ಕಿನಿಂದ ಬೆಟ್ಟ ಹತ್ತಲು ಪ್ರಾರಂಭಿಸಿದರು. ಅದು ಸಾಮಾನ್ಯವಾದ ಬೆಟ್ಟವಲ್ಲ ಅತಿ ಕಡಿದಾದ ದಾರಿಯಿಂದ ಕೂಡಿದ ಬೆಟ್ಟ. ಸದಾ ಹಿಮಪಾಯ, ಕಲ್ಲು ಬಂಡೆಗಳಿಂದ ಕೂಡಿದೆ, ಕಾಲಿಟ್ಟರೆ ಜಾರುವಷ್ಟು ಬೀಳುವ ಹಿಮ, -32° ಯಷ್ಟು ಕೊರೆಯುವ ಚಳಿ ಇಂತಹ ದುರ್ಗಮ ದಾರಿ ಮತ್ತು ಸ್ಥಿತಿಯಲ್ಲು ಶತ್ರುಗಳಿಗೆ ಕಾಣದಂತೆ ಬೆಟ್ಟ ಹತ್ತಿದ ತಂಡ, ಶತ್ರುಗಳು ಇದ್ದ ಪಾಯಿಂಟ್ ತಲಪುತ್ತದೆ. ಇವರು ಮತ್ತು ಇವರ ತಂಡ ಅಲ್ಲೆ ಒಂದು ಬಂಡೆಗೆ ಅವಿತು ಕೂತು ಶತ್ರುಗಳ ಚಲನವಲನಗಳನ್ನು ಗಮನಿಸುತ್ತದೆ, ಸರಿಯಾದ ಸಮಯ ನೋಡಿ ದಾಳಿ ಮಾಡಬೇಕೆಂದು.
ಹೊತ್ತು ಕಳೆಯುತ್ತಾ ಬರುತ್ತೆ ಸಂಜೆ ಆಗುತ್ತಿರುತ್ತದೆ ಆ ಸಮಯದಲ್ಲಿ ದಾಳಿ ಮಾಡುತ್ತದೆ ಇವರ ತಂಡ ಆ ಕಡೆಯಿಂದ ಪ್ರತಿದಾಳಿ ಪ್ರಾರಂಭವಾಗುತ್ತದೆ ಸುಮಾರು 2ಗಂಟೆ ಗುಂಡಿನ ಚಕಮಕಿ ನಡೆಯುತ್ತದೆ ಇವರ ದೇಹಕ್ಕೆ ಮತ್ತು ಕಾಲಿಗೆ ಗುಂಡು ಹೊಕ್ಕುತ್ತದೆ ಇವರು ಬೆಟ್ಟದ ಒಂದು ಬಂಡೆಗೆ ಅವಿತು ಬೀಳುತ್ತಾರೆ, ನಂತರ ಈ ವೀರ ತನ್ನ ರೌದ್ರಾವತಾರ ತೋರಿಸಲು ಪ್ರಾಂಭಿಸುತ್ತಾನೆ. ಇವರು ಯಾವುದೇ ರಕ್ಷಣೆ ಇಲ್ಲದೆ ನೇರವಾಗಿ ಶತೃಗಳ ಮೇಲೆ ದಾಳಿ ಮಾಡುತ್ತಾರೆ ಅವರ ಸಂಪೂರ್ಣ ಮೊದಲನೇ ತುಕುಡಿ ನಾಶ ಮಾಡುತ್ತಾರೆ ಇಷ್ಟಾದರೂ ಕೆಳಗೆ ಇಳಿಯದ ಈ ದಿಟ್ಟ ಹೋರಾಟಗಾರ ಎರಡನೇ ತುಕುಡಿಯ್ತ ಹೊರಡುತ್ತಾರೆ. ಪಾಕಿಸ್ತಾನಿ ಸೈನಿಕರ ಮೇಲೆ ಮೊದಲು ಗ್ರೆನೆಡ್ ಎಸೆಯುತ್ತಾರೆ ಆರು ಪಾಕಿ ಸೈನಿಕರು ಸಾಯುತ್ತಾರೆ ನಂತರ ನೇರವಾಗಿ ಯುದ್ಧ ಮಾಡಲು ಪ್ರಾರಂಭಿಸಿ, ಅವರ ಕಡೆ ಇದ್ದ ಮಷಿನ್ ಗನ್ ಮತ್ತು ಗುಂಡುಗಳನ್ನು ಕಳೆದುಕೊಂಡು ದಾಳಿ ಮಾಡಿ, ಸಂಪೂರ್ಣ ಎರಡನೇ ತುಕಡಿಯನ್ನು ನಾಶಗೊಳಿಸುತ್ತಾರೆ. ಬಟಾಲಿಕ್ ಪಾಯಿಂಟ್ 4812 ಇವರ ಕೈವಶವಾಗುತ್ತದೆ. ಆದರೆ ಮೇಜರ್ ಕಿಶಿಂಗ್ ಕ್ಲಿಪೊರ್ಡ ನೋನಗೃಮ್ ಕ್ಷತ್ರಿಯ ಇರುವುದಿಲ್ಲ. ಇವರು ಜುಲೈ 1 1999ರಂದು ತಮ್ಮ 24ನೇ ವಯಸ್ಸಿನಲ್ಲಿ ವೀರ ಮರಣ ಹೊಂದುತ್ತಾರೆ. ಇವರ ಶೌರ್ಯ, ಪರಾಕ್ರಮಕ್ಕೆ ಮಹಾ ವೀರ ಚಕ್ರ ದೊರೆಯುತ್ತದೆ.