ಅಕ್ಕಿ ಕೇಳಿದ್ರೆ ಸಾಯಿರಿ ಅನ್ನೋದೆ ಬಿಜೆಪಿ ತಾಲಿಬಾಸ್ ಸಂಸ್ಕøತಿ : ಕಾಂಗ್ರೆಸ್

1 min read
belagavi by election

ಅಕ್ಕಿ ಕೇಳಿದ್ರೆ ಸಾಯಿರಿ ಅನ್ನೋದೆ ಬಿಜೆಪಿ ತಾಲಿಬಾಸ್ ಸಂಸ್ಕøತಿ : ಕಾಂಗ್ರೆಸ್

ಬೆಂಗಳೂರು : ಅಕ್ಕಿ ಕೇಳಿದವರಿಗೆ ಹೋಗಿ ಸಾಯಿರಿ ಎನ್ನುವುದೇ ಬಿಜೆಪಿಯ ತಾಲಿಬಾನ್ ಸಂಸ್ಕøತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ.

ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು.

ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ.

ಅದೇ ಕಾರಣಕ್ಕೆ ತಾಲಿಬಾನ್ ಮತ್ತು ಆರ್ ಎಸ್ ಎಸ್ ಒಂದೇ ತರ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು.

bjp congress saaksha tv

ಇದಕ್ಕೆ ಇಂದು ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಟಾಂಗ್ ನೀಡಿದ್ದು, ಮಹಿಳೆಯರು ಹೊರಬರದಂತೆ ಫಾರ್ಮಾನು ಹೊರಡಿಸುವುದು, ಅಕ್ಕಿ ಕೇಳಿದವರಿಗೆ ಹೋಗಿ ಸಾಯಿರಿ ಎನ್ನುವುದೇ ಬಿಜೆಪಿಯ ತಾಲಿಬಾನ್ ಸಂಸ್ಕøತಿ.

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಗಟ್ಟಿಯಾಗಿ ಸ್ಥಾಪಿಸಿದೆ, ನಿಮ್ಮ ತಾಲಿಬಾನ್ ಸಂಸ್ಕೃತಿಯ ಆಟ ನಡೆಯದು.

ಅಂದಹಾಗೆ ತಾವು ಸದಾ ನಶೆಯಲ್ಲಿರಬೇಡಿ, ಇನ್ನಷ್ಟು ಜೀವಗಳನ್ನು ತೆಗೆಯಬೇಡಿ ಸಿ.ಟಿ.ರವಿ ಎಂದು ಕುಟುಕಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd