Karnataka BJP | ಅಗ್ನಿಪಥ್ ಯೋಜನೆ ವಿರುದ್ಧ ಹೋರಾಟ ಕಾಂಗ್ರೆಸ್ ಹೆಣೆದ ಟೂಲ್ ಕಿಟ್
ಬೆಂಗಳೂರು : ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಹೋರಾಟ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಹೆಣೆದ ಟೂಲ್ ಕಿಟ್ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.
ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಶುಕ್ರವಾರ ಸಿಕಂದ್ರಾಬಾದ್ ರೈಲ್ವೆ ನಿಲ್ದಾಣದಲ್ಲಿ ಗಲಭೆ ನಡೆಯಿತು.
ಇದು ಹಠಾತ್ತಾಗಿ ನಡೆದ ಬೆಳವಣಿಗೆಯಲ್ಲ ಬದಲಿಗೆ ಈ ಗಲಭೆಯ ಹಿಂದೆ ಪ್ರಚೋದನಾತ್ಮಕವಾದ ಆಡಿಯೋ ತುಣುಕುಗಳೇ ಕಾರಣ ಎಂದು ಅಂಶವನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಹೋರಾಟ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಹೆಣೆದ ಟೂಲ್ ಕಿಟ್ ಎಂದು ಆರೋಪಿಸಿದೆ.
ಅಲ್ಲದೇ ದೇಶದ ಅಖಂಡತೆಗೆ ಭಂಗ ತರುವುದು ಹಾಗೂ ಆಂತರಿಕ ಶಾಂತಿ ಕದಡುವುದು ಮಾತ್ರ ಅವರ ಉದ್ದೇಶ.
#AgnipathScheme ಮೂಲಕ ದೇಶದ ಯುವಜನತೆ ರಾಷ್ಟ್ರವಾದಿಗಳಾಗುತ್ತಾರೆ ಎಂಭ ಭಯವೇ ಎಂದು ಬಿಜೆಪಿ ಪ್ರಶ್ನಿಸಿದೆ.
ಅಂದಹಾಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಯುವಕರು ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.








