Mallikarjun Kharge : ದಾಸ್ಯದ ವೃದ್ಧ ನಾಯಕ ಮಲ್ಲಿಕಾರ್ಜುನ ಖರ್ಗೆ.. ಬಿಜೆಪಿ ಟೀಕೆ Karnataka bjp-slams-congress-leader-mallikarjun-kharge
ಬೆಂಗಳೂರು : ಬಿಜೆಪಿಯನ್ನು ಬೀಜಿಂಗ್ ಜನತಾ ಪಕ್ಷ ಎಂದು ಟೀಕೆ ಮಾಡಿದ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಘಟಕ ಮುಗಿಬಿದ್ದಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ದಾಸ್ಯದ ವೃದ್ಧ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ, ಬಿಜೆಪಿಯನ್ನು ಬೀಜಿಂಗ್ ಜನತಾ ಪಕ್ಷ ಎಂದು ಹಂಗಿಸುವ ನಿಮಗೆ ಚೀನಾ ನಿಯೋಗದ ಜತೆಗೆ ನಿಮ್ಮ ನಾಯಕ ರಾಹುಲ್ ಗಾಂಧಿ ಮಾಡಿಕೊಂಡ ರಾಷ್ಟ್ರ ವಿರೋಧಿ ಒಪ್ಪಂದ ಮರೆತು ಹೋಯಿತೇ ಎಂದು ಕುಟುಕಿದೆ.
ಅಲ್ಲದೇ ದೇಶದ ಸಮಗ್ರತೆ ಹಾಗೂ ಅಖಂಡತೆಗೆ ನೆಹರೂ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಆತಂಕ ಸೃಷ್ಟಿಸುತ್ತಲೇ ಬಂದಿದೆ.ಚೀನಾ ಜತೆಗೆ ನೆಹರೂ ವಂಶ ಹೊಂದಿರುವ ರಹಸ್ಯ ನಂಟು ಬಯಲಾಗಬೇಕು. ಖರ್ಗೆಯವರೇ ನಿಮ್ಮ ಬಳಿ ಈ ಕುರಿತು ಸಾಕ್ಷ್ಯ ಇದೆಯೇ ಎಂದು ಪ್ರಶ್ನಿಸಿದೆ.
ದೇಶದ ಸಮಗ್ರತೆ ಹಾಗೂ ಅಖಂಡತೆಗೆ ನೆಹರೂ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಆತಂಕ ಸೃಷ್ಟಿಸುತ್ತಲೇ ಬಂದಿದೆ.
ಚೀನಾ ಜತೆಗೆ ನೆಹರೂ ವಂಶ ಹೊಂದಿರುವ ರಹಸ್ಯ ನಂಟು ಬಯಲಾಗಬೇಕು. ಖರ್ಗೆಯವರೇ ನಿಮ್ಮ ಬಳಿ ಈ ಕುರಿತು ಸಾಕ್ಷ್ಯ ಇದೆಯೇ?
— BJP Karnataka (@BJP4Karnataka) February 6, 2022
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದ ಮಲ್ಲಿಕಾರ್ಜುನ್ ಖರ್ಗೆ, ಬೀಜಿಂಗ್ ಜನತಾ ಪಕ್ಷವು ನಮ್ಮ ಭೂಮಿಯನ್ನು ಚೀನಾಗೆ ಶರಣಾಗತಿ ಮಾಡಿದ್ದಲ್ಲದೇ ನಮ್ಮ ಆರ್ಥಿಕತೆಯನ್ನು ಒಪ್ಪಿಸಿದೆ ಎಂದು ಕಿಡಿಕಾರಿದ್ದರು.