BJP | ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ವೃಥಾರೋಪ
ಬೆಂಗಳೂರು : ನಿರಂತರ ಸೋಲು ಮತ್ತು ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ವೃಥಾರೋಪ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಆರೋಪ ಮಾಡಿದೆ.
ಕಾಂಗ್ರೆಸ್ ವಿರುದ್ಧ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಪಿಎಸ್ಐ ನೇಮಕ ಹಗರಣ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲೂ ರಾಜ್ಯ ಬಿಜೆಪಿ ಸರ್ಕಾರ ಕ್ಷಿಪ್ರ ಕಾರ್ಯಾಚರಣೆ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿದೆ. ಆರೋಪಿಗಳು ಯಾರೇ ಆಗಿರಲಿ ಅವರನ್ನು ಕಾನೂನು ಚೌಕಟ್ಟಿನಲ್ಲಿ ನಿಲ್ಲಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಪ್ರೇರಿತ ಜಿಹಾದಿಗಳು ಹುಬ್ಬಳ್ಳಿಯಲ್ಲಿ ನಡೆಸಿದ ಗಲಭೆ ಹಾಗೂ ಮೈಸೂರಿನಲ್ಲಿ ಛೋಟಾ ಪಾಕಿಸ್ತಾನ ಕೂಗು ಪ್ರಕರಣದಲ್ಲಿ ನಮ್ಮ ಸರ್ಕಾರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಮಾಜ ವಿದ್ರೋಹಿಗಳ ಹೆಡೆಮುರಿ ಕಟ್ಟಿದೆ.
ನಿರಂತರ ಸೋಲು ಮತ್ತು ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ವೃಥಾರೋಪ ಮಾಡುತ್ತಿದೆ.#CONgressPSIToolkit
— BJP Karnataka (@BJP4Karnataka) May 7, 2022
ಪಿಎಸ್ಐ ನೇಮಕ ಅಕ್ರಮದಲ್ಲಿ ಇದುವರೆಗೆ ಆದ ಬಂಧನದ ಬಳಿಕವೂ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಅರ್ಥವೇ ಇಲ್ಲ.ನೇಮಕ ವಿಭಾಗದ ಹಿರಿಯ ಅಧಿಕಾರಿಗಳು ಸೇರಿದಂತೆ ಶಂಕಿತರನ್ನು ಕಟ್ಟುನಿಟ್ಟಿನ ವಿಚಾರಣೆಗೆ ಒಳಪಡಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ನೇಮಕ ಹಗರಣದ ಆರೋಪಿಗಳಿಗೆ ರಾಜ ಮರ್ಯಾದೆ ಇದ್ದಿದ್ದು ಸುಳ್ಳೇ ಎಂದು ಬಿಜೆಪಿ ಕುಟುಕಿದೆ.
ಪಿಎಸ್ಐ ನೇಮಕ ಅಕ್ರಮದಲ್ಲಿ ಇದುವರೆಗೆ ಆದ ಬಂಧನದ ಬಳಿಕವೂ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಅರ್ಥವೇ ಇಲ್ಲ.
ನೇಮಕ ವಿಭಾಗದ ಹಿರಿಯ ಅಧಿಕಾರಿಗಳು ಸೇರಿದಂತೆ ಶಂಕಿತರನ್ನು ಕಟ್ಟುನಿಟ್ಟಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ನೇಮಕ ಹಗರಣದ ಆರೋಪಿಗಳಿಗೆ ರಾಜ ಮರ್ಯಾದೆ ಇದ್ದಿದ್ದು ಸುಳ್ಳೇ?#CONgressPSIToolkit
— BJP Karnataka (@BJP4Karnataka) May 7, 2022
ಕಾಂಗ್ರೆಸ್ ಪ್ರೇರಿತ ಜಿಹಾದಿಗಳು ಹುಬ್ಬಳ್ಳಿಯಲ್ಲಿ ನಡೆಸಿದ ಗಲಭೆ ಹಾಗೂ ಮೈಸೂರಿನಲ್ಲಿ ಛೋಟಾ ಪಾಕಿಸ್ತಾನ ಕೂಗು ಪ್ರಕರಣದಲ್ಲಿ ನಮ್ಮ ಸರ್ಕಾರ ಕ್ಷಿಪ್ರ ಕಾರ್ಯಾಚರಣೆ ಮೂಲಕ ಸಮಾಜ ವಿದ್ರೋಹಿಗಳ ಹೆಡೆಮುರಿ ಕಟ್ಟಿದೆ. ನಿರಂತರ ಸೋಲು ಮತ್ತು ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ವೃಥಾರೋಪ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
karnataka bjp-slams on twitter Congress despair