BJP vs Congress tweet war | ಬಿಜೆಪಿಯಲ್ಲಿ “ಸೂಟ್ ಕೇಸ್” ಮುಖ್ಯ : ಕಾಂಗ್ರೆಸ್ ವ್ಯಂಗ್ಯ

1 min read
Congress padayatre bjp vs congress tweet war saaksha tv

BJP vs Congress tweet war | ಬಿಜೆಪಿಯಲ್ಲಿ “ಸೂಟ್ ಕೇಸ್” ಮುಖ್ಯ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಟಿಕೆಟಿಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗದರೂ ಸರಿ ಬಿಜೆಪಿಯಲ್ಲಿ “ಸೂಟ್ ಕೇಸ್” ಮುಖ್ಯ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಗಿದೆ.

ಪಿಎಸ್ ಐ ನೇಮಕಾತಿ, ಭ್ರಷ್ಟಚಾರ ವಿಚಾರವಾಗಿ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗುದ್ದಾಟ ನಡೆಯುತ್ತಿದೆ.

Karnataka bjp-vs-congress-tweet-war Saaksha Tv
Karnataka bjp-vs-congress-tweet-war Saaksha Tv

ಅದರ ಮುಂದುವರೆದ ಭಾಗವಾಗಿ ಕಾಂಗ್ರೆಸ್, ಮೊನ್ನೆಯಷ್ಟೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು “ಟಿಕೆಟ್‌ಗಾಗಿ ಸೀರೆ, ಪಂಚೆ ಹಿಡಿದು ಬರಬೇಡಿ” ಎಂದು ತಮ್ಮ ಪಕ್ಷದವರಿಗೆ ಹೇಳಿದ್ದರು.

ಹಿಡಿದು ಬರಬೇಕಿರುವುದು “ಸೂಟ್ ಕೇಸ್” ಎಂಬುದನ್ನು ಯತ್ನಾಳ್ ಅವರು ತಿಳಿಸಿದ್ದಾರೆ. ಟಿಕೆಟಿಗಾದರೂ ಸರಿ, ಮಂತ್ರಿಗಿರಿ, ಸಿಎಂ ಹುದ್ದೆಗದರೂ ಸರಿ ಬಿಜೆಪಿಯಲ್ಲಿ “ಸೂಟ್ ಕೇಸ್” ಮುಖ್ಯ ಎಂದು ಕುಟುಕಿದೆ.

ಇತ್ತ ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ… ಪಿಎಸ್ಐ ನೇಮಕ ಹಗರಣ ಆರೋಪಿಗಳಾದ ರುದ್ರೇಗೌಡ ಪಾಟೀಲ್ ಸಹೋದರರು ಪ್ರಿಯಾಂಕ್ ಖರ್ಗೆ ಅತ್ಯಾಪ್ತರು.

ಖರ್ಗೆ ಕುಟುಂಬಕ್ಕೆ ಆರೋಪಿಗಳು ನಿಷ್ಠರಾಗಿದ್ದಾರೆ. ಈ ಆರೋಪಿಗಳೇ ಹಗರಣದ ಪ್ರಧಾನ ಸೂತ್ರಧಾರರು. ಈ ಬಗ್ಗೆಯಾದರೂ ಸಿಐಡಿಗೆ ಸ್ಪಷ್ಟನೆ ನೀಡಿ ಎಂದು ಬಿಜೆಪಿ ಕುಟುಕಿದೆ.

ಸಿಐಡಿ ಪೊಲೀಸರು ಪ್ರಿಯಾಂಕ್‌ ಖರ್ಗೆ ಅವರಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಅನ್ವಯ ನೋಟಿಸ್ ನೀಡಿದ್ದಾರೆ.

ಇದಕ್ಕೆ ಉತ್ತರಿಸುವುದು ಖರ್ಗೆ ಅವರ ಸಂವಿಧಾನ ಬದ್ಧ ಕರ್ತವ್ಯ‌. ಖರ್ಗೆ ಕುಟುಂಬದವರು ಸಂವಿಧಾನಕ್ಕೆ ಅತೀತರೇ? ಅಥವಾ ಹಕ್ಕುಗಳಿಗೆ ಮಾತ್ರ ಭಾಜನರೇ  ಎಂದು ಬಿಜೆಪಿ ಪ್ರಶ್ನಿಸಿದೆ. Karnataka bjp-vs-congress-tweet-war 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd