Politics : ಇದು ಚುನಾವಣಾ ಬಜೆಟ್ , ನಿರಾಶಾದಾಯಕ ಬಜೆಟ್ : ಡಿಕೆಶಿ
ಬೆಂಗಳೂರು : ನೀವು ಮಾಡ್ತಾ ಇರುವ ಕೋಮು ಗಲಭೆಗಳು , ಉಡುಪಿ, ಶಿವಮೊಗ್ಗ ದಲ್ಲಿ ಅದ ಘಟನೆ ನೋಡ್ತಾ ಇದ್ರೆ ಯಾರಾದರು ಬಂಡವಾಳ ಹಾಕಲು ಮುಂದೆ ಬರ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಇದೇ ವೇಳೆನಿಮಗೆ ಪೊಲಿಟಿಕಲ್ ವಿಲ್ ಇಲ್ಲ, ಸರ್ಕಾರಿ ನೌಕರರಿಗೆ ಪೇ ಕಮಿಷನ್ ಏನಾದರು ಮಾಡಿದ್ದಿರಾ. ಈ ಬಜೆಟ್ ಚುನಾವಣಾ ಬಜೆಟ್ , ಕೈಗಾರಿಕೆ ಕೃಷಿಗೆ ತೋಟಗಾರಿಕೆಗೂ ಇಲ್ಲ, ಯಾವುದಕ್ಕೂ ಇಲ್ಲ, ಶಿಕ್ಷಣ, ಆರೋಗ್ಯ, ಕ್ರೀಡೆ ಎಲ್ಲ ನಮ್ಮ ಜವಾಬ್ದಾರಿ . ಪ್ಲೇ ಅಂಡ್ ಪೇ ಅಂತೆ ಹಣ ಕೊಟ್ಟು ಆಟ ಆಡಬೇಕಾ…
ಎಲ್ಲಾ ಕಮರ್ಷಿಯಲ್ ಮಾಡ್ತಾ ಇದಿರಲ್ಲಾ. ಕೇಂದ್ರ ಖಾಸಗಿಕರಣ ಮಾಡಿದ್ರೆ. ನೀವು ವ್ಯಾಪಾರಿಕರಣ ಮಾಡ್ತಾ ಇದಾರೆ ಕೋವಿಡ್ ಸಮಯದಲ್ಲಿ ಏನ್ ಮಾಡಿದ್ದಿರಾ.. 20 ಲಕ್ಷ ಕೋಟಿ ಘೋಷಣೆ ಮಾಡಿದ್ರಲ್ಲ..ಯಾರಿಗೆ ಕೊಟ್ರಿ..
ಎರಡು ವರ್ಷ ಮುಚ್ಚು ಬಿಟ್ರ. ಜನ ನರಳು ಬಿಟ್ಟರು. ಕೇವಲ ಭಾವನಾತ್ಮಕವಾಗಿ ತೆಗೆದುಕೊಂಡು ಹೋದರಿ ಬಿಟ್ರೆ , ಅಭಿವೃದ್ಧಿ ಮಾಡ್ತಾ ಇಲ್ಲ, ಯಾವ ವರ್ಗಕ್ಕೂ ಸಹಾಯ ಇಲ್ಲ , ಇದು ನಿರಾಶಾದಾಯಕ ಬಜೆಟ್ ಎಂದು ಕಿಡಿಕಾರಿದ್ದಾರೆ..