Karnataka Budget Live : ಕೃಷಿಗೆ 31,028 ಕೋಟಿ, ಬಿಎಸ್ ವೈ `ಮಠ ಮಂತ್ರ’
1 min read
Karnataka Budget Live : ಕೃಷಿಗೆ 31,028 ಕೋಟಿ, ಬಿಎಸ್ ವೈ `ಮಠ ಮಂತ್ರ’
ಬೆಂಗಳೂರು : ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಆರಂಭದಲ್ಲಿ ಮಹಿಳೆಯರಿಗೆ ಬಂಪರ್ ಗಿಪ್ಟ್ ನೀಡಿದ ಅವರು, ಇದೀಗ ಕೃಷಿಗೆ 31,028 ಕೋಟಿ ರೂ.ಅನುದಾನ ಘೋಷಿಸಿದ್ದಾರೆ.
ಇದಲ್ಲದೆ ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ, ಕಿತ್ತೂರು ಅಭಿವೃದ್ದಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ. ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ದಿಗೆ 5 ಕೋಟಿ ರೂಪಾಯಿ ಘೋಷಿಸಿದ್ದಾರೆ.
ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್ ನಿರ್ಮಾಣ ಮಾಡೋದಾಗಿ ತಿಳಿಸಿದ್ದು, ಆದಿಚುಂಚನಗಿರಿ ಮಠಕ್ಕೆ 10 ಕೋಟಿ ರೂಪಾಯಿ, ಮಂಡ್ಯ ಸ್ಟೇಡಿಯಂಗೆ 10 ಕೋಟಿ ರೂಪಾಯಿ, ಬಸವಕಲ್ಯಾಣಕ್ಕೆ 200 ಕೋಟಿ ರೂ ಅನುದಾನ ನೀಡಿದ್ದಾರೆ.
ಬೇಡ್ತಿ, ವರದಾ ನದಿ ಜೋಡಣೆ, ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ. ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ಮೀಸಲಿಟ್ಟಿದ್ದಾರೆ.
ಗೋಪಿನಾಥಂನಲ್ಲಿ ಸಫಾರಿ ಯೋಜನೆಗೆ 5 ಕೋಟಿ ರೂಪಾಯಿ, ವೀರಶೈವ ಲಿಂಗಾಯತರಿಗೆ 500 ಕೋಟಿ ರೂಪಾಯಿ.
ಒಕ್ಕಲಿಗ ಅಭಿವೃದ್ದಿ ನಿಗಮಕ್ಕೆ 500 ಕೋಟಿ ರೂಪಾಯಿ, ಹಿಂದುಳಿದ ವರ್ಗಗಳಿಗೆ 500 ಕೋಟಿ ರೂಪಾಯಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 50 ಕೋಟಿ.
ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ, ಉಪನಗರ ರೈಲು ಯೋಜನೆಗೆ 15, 757 ಕೋಟಿ ರೂಪಾಯಿ. ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ.