karnataka cabinet | ಏಪ್ರಿಲ್ ಬಳಿಕ ರಾಜ್ಯ ಸಂಪುಟ ವಿಸ್ತರಣೆ
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಸರ್ಕಸ್ ಆರಂಭವಾಗಿದ್ದು, ಸಚಿವಾಕಾಂಕ್ಷಿಗಳು ತೆರೆಮರೆಯಲ್ಲಿ ಮಂತ್ರಿಗಿರಿಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಮುಂದಿನ ಚುನಾವಣೆ ಒಳಗಾಗಿ ಸಚಿವರಾಗಬೇಕು ಎಂದು ಸಾಕಷ್ಟು ಎಂಎಲ್ ಎಗಳು ಪ್ಲಾನ್ ಮಾಡಿಕೊಳ್ಳುತ್ತಾ, ಹೈಕಮಾಂಡ್ ಗೆ ತಮ್ಮ ಮನವಿ ಸಲ್ಲಿಕೆ ಮಾಡುತ್ತಿದ್ದಾರೆ.
ಆದ್ರೆ ಏಪ್ರಿಲ್ ವರೆಗೂ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ನೀನ್ ಸಿಗ್ನಲ್ ನೀಡುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಪಂಚ ರಾಜ್ಯಗಳ ಚುನಾವಣೆ..!!

ಹೌದು…! ಮುಂದಿನ ತಿಂಗಳು 10 ರಂದು ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳಿಗೆ ಚುನಾವಣೆ ನಡೆಯಲಿದೆ.
ಹೀಗಾಗಿ ಬಿಜೆಪಿ ಹೈಕಮಾಂಡ್ ತನ್ನ ಸಂಪೂರ್ಣ ಗಮನವನ್ನು ಈ ಚುನಾವಣೆಯತ್ತ ನೆಟ್ಟಿದೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪ್ರಾಬಲ್ಯ ಬೀರುವ ದೃಷ್ಠಿಯಲ್ಲಿ ರಣತಂತ್ರಗಳನ್ನು ರೂಪಿಸುತ್ತಿದೆ.
ಹೀಗಾಗಿ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಹೆಚ್ಚು ತಲೆಕಡೆಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ.
ಈ ಪಂಚ ರಾಜ್ಯಗಳ ಚುನಾವಣೆ ಬಳಿಕ ರಾಜ್ಯದಲ್ಲಿನ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಗಮನ ಹರಿಸಲಿದೆ. karnataka cabinet expansion after april saaksha tv
ಮೂಲಗಳ ಪ್ರಕಾರ ಏಪ್ರಿಲ್ ಬಳಿಕ ರಾಜ್ಯದಲ್ಲಿನ ಸಚಿವಾಕಾಂಕ್ಷಿಗಳಿಗೆ ಬಿಜೆಪಿ ಬಿಗ್ ಬಾಸ್ ಗಳು ಗುಡ್ ನ್ಯೂಸ್ ನೀಡಬಹುದು,