Congress | ಬೊಮ್ಮಾಯಿ ಅವರೇ ಕಾಲುವೆ ನಿರ್ಮಿಸಲು 40% ಕಮಿಷನ್ ವ್ಯವಹಾರ ಕುದುರಲಿಲ್ಲವೇ : ಕೈ ಕಿಡಿ
ಬೆಂಗಳೂರು : 40 ಪರ್ಸೆಂಟ್ ಪರ್ಸಂಟೇಜ್ ವಿಷಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಟ್ವಿಟ್ಟರ್ ನಲ್ಲಿ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಕಾಂಗ್ರೆಸ್ ನಿಮ್ಮತ್ರ ಉತ್ತರ ಇದ್ಯಾ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಹತ್ತಿ ಬೆಳೆಯ ಮಳೆಯಾಶ್ರಿತ ಪ್ರದೇಶಗಳಿಗೆ ಕಾಲುವೆ ನಿರ್ಮಿಸಿ ನೀರಾವರಿ ವ್ಯವಸ್ಥೆ ಮಾಡುತ್ತೇವೆ ಎಂದಿತ್ತು ಬಿಜೆಪಿ.
ಇದುವರೆಗೂ ಒಂದೂ ನೀರಾವರಿ ಯೋಜನೆ ಕೈಗೊಂಡಿಲ್ಲ, ನೆರೆ, ಬರದಿಂದ ಹತ್ತಿ ಬೆಳೆ ಕಳೆದುಕೊಂಡವರ ಕಡೆ ಪರಿಹಾರ ನೀಡಲಿಲ್ಲ.

ಕಾಲುವೆ ನಿರ್ಮಿಸಲು 40% ಕಮಿಷನ್ ವ್ಯವಹಾರ ಕುದುರಲಿಲ್ಲವೇ ಬಸವರಾಜ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದೆ.
ಒಂದು ಮಳೆಗೆ ಬೆಂಗಳೂರಿನ ರಸ್ತೆಗಳು ಕಿತ್ತುಹೋಗುತ್ತವೆ ಎಂದರೆ ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಲೂಟಿ 40ರಿಂದ 90 ಪರ್ಸೆಂಟಿಗೆ ಏರಿಕೆಯಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ!
ಮುಖ್ಯಮಂತ್ರಿಗಳೇ, ನಗರಾಭಿವೃದ್ಧಿ ಖಾತೆ ನಿಮ್ಮಲ್ಲೇ ಇದೆ, ಬೆಂಗಳೂರು ಉಸ್ತುವಾರಿ ನಿಮ್ಮಲ್ಲೇ ಇದೆ, ಕಮಿಷನ್ ವಸೂಲಿಯ ಹಿಡಿತವೂ ನಿಮ್ಮಲ್ಲೇ ಇದೆಯೇ ಎಂದು ಕಾಂಗ್ರೆಸ್ ಕುಟುಕಿದೆ.








