ಸಿಎಂ ಕುರ್ಚಿಯಿಂದ ಇಳಿಸುವಾಗ ‘ಕಣ್ಣೀರು’ ವಿಜಯೇಂದ್ರರಿಗೆ ಪರಿಷತ್ ಟಿಕೆಟ್ ನಿರಾಕರಿಸುವಾಗ ‘ರಕ್ತ ಕಣ್ಣೀರು’
ಬೆಂಗಳೂರು : ಸಿಎಂ ಕುರ್ಚಿಯಿಂದ ಇಳಿಸುವಾಗ ‘ಕಣ್ಣೀರು’ ವಿಜಯೇಂದ್ರರಿಗೆ ಪರಿಷತ್ ಟಿಕೆಟ್ ನಿರಾಕರಿಸುವಾಗ ‘ರಕ್ತ ಕಣ್ಣೀರು’ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಬಗ್ಗೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್, ರಾಜ್ಯ ಬಿಜೆಪಿಯನ್ನು ಕುಟುಕಿದೆ.
ಈ ಕುರಿತು ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಸಿಎಂ ಕುರ್ಚಿಯಿಂದ ಇಳಿಸುವಾಗ ‘ಕಣ್ಣೀರು’ ವಿಜಯೇಂದ್ರರಿಗೆ ಪರಿಷತ್ ಟಿಕೆಟ್ ನಿರಾಕರಿಸುವಾಗ ‘ರಕ್ತ ಕಣ್ಣೀರು’. ಇದು ಬಿಜೆಪಿ ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣ ಸಂದಾಯದ ಕೊಡುಗೆಗಳು! ಬಿಜೆಪಿಯಲ್ಲಿನ ‘ಸಂತೋಷ ಕೂಟ’ ಬಿ.ಎಸ್.ಯಡಿಯೂರಪ್ಪ ಅವರನ್ನಲ್ಲದೆ ಇಡೀ ಕುಟುಂಬವನ್ನೇ ವನವಾಸಕ್ಕೆ ಕಳಿಸಲು ಯಶಸ್ವಿಯಾಗಿದೆ. #BJPvsBJP ಯುದ್ಧಕಣ ರಂಗೇರಲಿದೆ ಎಂದು ಬರೆದುಕೊಂಡಿದೆ.
ಸಿಎಂ ಕುರ್ಚಿಯಿಂದ ಇಳಿಸುವಾಗ 'ಕಣ್ಣೀರು'
ವಿಜಯೇಂದ್ರರಿಗೆ ಪರಿಷತ್ ಟಿಕೆಟ್ ನಿರಾಕರಿಸುವಾಗ – 'ರಕ್ತ ಕಣ್ಣೀರು'ಇದು ಬಿಜೆಪಿ ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣ ಸಂದಾಯದ ಕೊಡುಗೆಗಳು!
ಬಿಜೆಪಿಯಲ್ಲಿನ 'ಸಂತೋಷ ಕೂಟ' @BSYBJP ಅವರನ್ನಲ್ಲದೆ ಇಡೀ ಕುಟುಂಬವನ್ನೇ ವನವಾಸಕ್ಕೆ ಕಳಿಸಲು ಯಶಸ್ವಿಯಾಗಿದೆ.#BJPvsBJP ಯುದ್ಧಕಣ ರಂಗೇರಲಿದೆ!
— Karnataka Congress (@INCKarnataka) May 24, 2022
ಇದೇ ವೇಳೆ ಶಿಕ್ಷಣ ಸಚಿವರ, ನೆಹರು ಮಗಳಿಗೆ ಬರೆದ ಪತ್ರ ಮಕ್ಕಳು ಏಕೆ ಓದಬೇಕು ಎಂಬ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ.. ಮಾನ್ಯ ಸಚಿವರೇ, ನೆಹರು ಮಗಳಿಗೆ ಬರೆದ ಪತ್ರಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿವೆ. ಅವುಗಳನ್ನಲ್ಲದೆ ನಿಮ್ಮ ಸಾವರ್ಕರ್ ಬ್ರಿಟಿಷರಿಗೆ ಸಾರಿ ಕೇಳಿದ ಪತ್ರಗಳನ್ನಾದರೂ ಓದಿಸಿ, ನಿಮ್ಮ ಸಂಘದ ದೇಶದ್ರೋಹದ ನೈಜತೆ ಪಸರಿಸಲಿ! ರಾಷ್ಟ್ರಧ್ವಜವನ್ನು ‘ಅಪಶಕುನ’ ಎಂದು ಕರೆದು ಅವಮಾನಿಸಿದ ಸಂಘಟನೆ ಯಾವುದು ಎಂಬುದನ್ನಾದರೂ ಹೇಳಿ. ಯುವಪೀಳಿಗೆ ಜಾಗೃತವಾಗಲಿ ಎಂದಿದೆ. Karnataka congress slams bs yediyurappa