ಕೊರೊನಾ | ರಾಜ್ಯದಲ್ಲಿ ನಿನ್ನೆಗಿಂತ ಇವತ್ತು 30 ಹೆಚ್ಚು ಕೇಸ್ ಪತ್ತೆ

1 min read
Corona saaksha tv

ಕೊರೊನಾ | ರಾಜ್ಯದಲ್ಲಿ ನಿನ್ನೆಗಿಂತ ಇವತ್ತು 30 ಹೆಚ್ಚು ಕೇಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಇಂದು 254 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಮೂರು ಮಂದಿ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 29,94,255ಕ್ಕೆ ಬಂದಿದೆ.

ಇದೇ ಅವಧಿಯಲ್ಲಿ ರಾಜ್ಯದಾದ್ಯಂತ 546 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಈವರೆಗೂ 29,49,629 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

Corona saaksha tv

ಕರ್ನಾಟಕದಲ್ಲಿನ್ನೂ 6,412 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.38 ರಷ್ಟಿದ್ದರೇ ಮರಣ ಪ್ರಮಾಣ ಶೇ.1.18 ರಷ್ಟಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಳ್ಳಾರಿ 1, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 152, ಚಾಮರಾಜನಗರ 2,

ಚಿಕ್ಕಮಗಳೂರು 5, ಚಿತ್ರದುರ್ಗ 4, ದಕ್ಷಿಣ ಕನ್ನಡ 14, ಧಾರವಾಡ 5, ಹಾಸನ 15, ಕಲಬುರಗಿ 1, ಕೊಡಗು 1, ಮಂಡ್ಯ 3, ಮೈಸೂರು 30, ಶಿವಮೊಗ್ಗ 4, ತುಮಕೂರು 4, ಉಡುಪಿ 8 ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd