ಗಮನಿಸಿ : ಇವತ್ತಿನಿಂದ ಹೋಟೆಲ್ ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ corona
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸ್ಫೋಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಟಫ್ ರೂಲ್ಸ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಹೋಟೆಲ್ ಗಳಲ್ಲಿ ಪಾರ್ಸೆಲ್ ಗಷ್ಟೆ ಅವಕಾಶ ನೀಡಲಾಗುತ್ತದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಇಂದಿನಿಂದ ಹೋಟೆಲ್ ನಲ್ಲಿ ಕೂತು ಊಟ ಮಾಡಂಗಿಲ್ಲ.
ಹೋಟೆಲ್ ನಲ್ಲಿ ಸರ್ವಿಸ್ ಗೆ ಅವಕಾಶ ಇಲ್ಲದಿರುವುದರಿಂದ ಪಾರ್ಸೆಲ್ ತೆಗೆದುಕೊಂಡು ಹೋಗಬೇಕು.
ಹೀಗಾಗಿ ಸಿಲಿಕಾನ್ ಸಿಟಿಯ ಬಹುತೇಕ ಹೋಟೆಲ್ ಗಳಲ್ಲಿ ಈಗಾಗಲೇ ಪಾರ್ಸೆಲ್ ಗಷ್ಟೆ ಅವಕಾಶ ಅಂತ ಬೋರ್ಡ್ ಹಾಕಲಾಗಿದೆ.
ಈ ನಿಯಮ ಮುಂದಿನ ತಿಂಗಳ ನಾಲ್ಕನೇ ತಾರೀಕಿನವರೆಗು ಇರುತ್ತೆ.