D K ಶಿವಕುಮಾರ್ ಜೊತೆ ವಿ ಸೋಮಣ್ಣ ಪೋಟೋ ವೈರಲ್ – ಸ್ಪಷ್ಟನೆ ನೀಡಿದ ಸೋಮಣ್ಣ…
ಡಿಕೆ ಶಿವಕುಮಾರ್ ಜೊತೆ ವಿ.ಸೋಮಣ್ಣ ಕುಳಿತುಕೊಂಡಿರುವ ಫೋಟೋ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಮಿತ್ರರೊಂದಿಗೆ ಮಾತನಾಡಿದ ಸೋಮಣ್ಣ “ಯಾವುದೋ ಕಾಲದಲ್ಲಿನ ಫೋಟೋ ತಗೊಂಡು ನೀವು ಏನೋ ಹಾಕಿಕೊಂಡ್ರೆ ನಾವೇನು ಮಾಡೋಕೆ ಆಗಲ್ಲ.ನಾನು ಬಿಜೆಪಿಯ ಶಾಸಕ, ಬಿಜೆಪಿ ಸರ್ಕಾರದ ಮಂತ್ರಿ, ನನಗೆ ನನ್ನ ಇತಿಮಿತಿ ಗೊತ್ತಿದೆ, ಎಷ್ಟು ಗೌರವವಾಗಿ ನಡೆದುಕೊಳ್ಳಬೇಕು ಗೊತ್ತಿದೆನಾನು ಯಾರ ಹತ್ರನೂ ಹೇಳಿಸಿಕೊಳ್ಳಬೇಕಿಲ್ಲ. ನಾನು ಬಿಜೆಪಿಲಿ ಸಕ್ರೀಯನಾಗಿ ಕೆಲಸ ಮಾಡ್ತಾ ಇದ್ದೀನಿ. ನಮಗೆ ನರೇಂದ್ರ ಮೋದಿ ಅವರು ನಾಯಕರು. ರಾಜ್ಯದಲ್ಲಿ ಬೊಮ್ಮಾಯಿ ನಾಯಕತ್ವ ಇದೆ, ಯಡಿಯೂರಪ್ಪ ಅವರ ಮಾರ್ಗದರ್ಶನ ಇದೆ, ಕಟೀಲ್ ಅವರು ಅಧ್ಯಕ್ಷರಾಗಿದ್ದಾರೆ. ಆ ತರಹದ ಊಹಾಪೋಹಗಳು ನಂದಲ್ಲ ಎಂದಿದ್ದಾರೆ.
ಸಚಿವ ವಿ ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ “ ನಾನು ಬಿಜೆಪಿಲಿದ್ದೀನಿ, ಬಿಜೆಪಿಯ ನಾಯಕನಾಗಿದ್ದೇನೆ, ನನ್ನ ಕೆಲಸ ನಾನು ಮಾಡ್ತಾ ಇದ್ದೀನಿ. ನನಗೆ ಚಿಲ್ಲರೆ ಬುದ್ಧಿ ಗೊತ್ತಿಲ್ಲ, ಚಿಲ್ಲರೆ ರಾಜಕಾರಣ ನಾನು ಮಾಡಲ್ಲ. ಇನ್ನೊಬ್ಬರ ತರ ಆಟ ಆಡಿಸೋದು ಗೊತ್ತಿಲ್ಲ ಕೆಲವು ಸಂಗತಿಗಳನ್ನು ಹೇಳುವಾಗ ನಿಷ್ಠುರವಾಗಿ ಮಾತಾಡ್ತಿನಿ. ಆ ನಿಷ್ಠುರ ಪಕ್ಷಕ್ಕೆ ಅಲ್ಲ, ಕೆಲವು ಕಹಿ ಘಟನೆಗಳು ಆಗಬಾರದು ಅನ್ನೋ ದೃಷ್ಟಿಯಿಂದ ಎಂದು ಹೇಳಿದ್ದಾರೆ.
ಬಿಜೆಪಿಯ ನಾಯಕ,10-15 ಜನರಲ್ಲಿ ನಾನೊಬ್ಬ ನಾಯಕ. ಈ ತರ ಕೇಳಿದ್ರೆ ನಮಗೆ ಸಿಟ್ಟು ಬರಿಸುತ್ತೀರ. ನಾನು ಬಿಜೆಪಿಯ ನಾಯಕನಾಗಿದ್ದೇನೆ. ನಮ್ಮ ನಾಯಕ ಮೋದಿ, ಬೊಮ್ಮಾಯಿ, ಅಮಿತ್ ಶಾ, ಯಡಿಯೂರಪ್ಪ, ಕಟೀಲು ಎಂದು ಹೇಳಿದ್ದಾರೆ.
Karnataka Election : V Somanna photo viral with D K Shivakumar – Somanna clarified…