ದುಬಾರಿ ದುನಿಯಾದಲ್ಲಿ ಜನತೆಗೆ ಮತ್ತೊಂದು ಬರೆ
ಬೆಂಗಳೂರು : ರಾಜ್ಯದ ಜನರಿಗೆ ಶೀಘ್ರದಲ್ಲಿಯೇ ಕರೆಂಟ್ ಶಾಕ್ ಹೊಡೆಯಲಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಬೆನ್ನಲ್ಲೆ ವಿದ್ಯುತ್ ದರ ಏರಿಕೆಗೆ ಸರ್ಕಾರ ಚಿಂತಿಸಿದೆ.
ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ, ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳವಾಗಿದೆ.
ಹೀಗಾಗಿ ಜುಲೈ 1 ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ.
ಮೂಲಗಳ ಪ್ರಕಾರ ಮುಂದಿನ ತಿಂಗಳ 1 ರಿಂದ ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಹೆಚ್ಚಾಗಲಿದೆಯಂತೆ.
ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಂದ 31 ರೂಪಾಯಿ ಪಾವತಿಸಬೇಕು ಎಂದು ವರದಿಯಾಗಿದೆ.