ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಕಟಕದ ಕರಕುಶಲ ಅನಾವರಣ Saaksha Tv
ನವದೆಹಲಿ: ನಾಳೆ ದೇಶಾದ್ಯಂತ ಗಣರಾಜ್ಯೋತ್ಸವ Republic Day ದಿನವಾಗಿ ಆಚರಿಸಲಾಗುತ್ತದೆ. ಈ ದಿನ ದೆಹಲಿಯ ರಾಜಪಥ್ ನಲ್ಲಿ ಪರೇಡ್ ನಡೆಯುತ್ತಿದ್ದು, ದೇಶದ ವಿವಿಧ ರಾಜ್ಯಗಳ ಸ್ಥಬ್ದ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಅದೇ ರೀತಿಯಾಗಿ ಈ ಬಾರಿ ‘ಕರ್ನಾಟಕ ಕರಕುಶ ಕಲಾ ವೈಭವ ಪ್ರದರ್ಶನವಾಗಲಿದೆ.
ದೇಶಕ್ಕೆ 1947 ಅಗಸ್ಟ್ 15 ರಂದು ಸ್ವಾತಂತ್ರ್ಯ ದೊರೆಯಿತು. ಸ್ವಾತಂತ್ರ್ಯ ದೊರೆತು 3 ವರ್ಷಗಳ ನಂತರ 1950 ಜನವರಿ 26 ರಂದು ದೇಶ ಗಣರಾಜ್ಯವಾಯಿತು. ಪ್ರತಿವರ್ಷ ಈ ದಿನ ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ನಮ್ಮ ದೇಶದ ಮೂರುದಳ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಶಕ್ತಿ ಪ್ರದರ್ಶನವಾಗುತ್ತದೆ. ಅದೇ ರೀತಿಯಾಗಿ ದೇಶದ ಸಂಕೃತಿ ಅನಾವರಣವಾಗುತ್ತದೆ.
ಈ ಬಾರಿ ದಕ್ಷಿಣ ಭಾರತದ 12 ರಾಜ್ಯಗಳ ಪೈಕಿ ರಾಜಪಥ್ ಪರೇಡ್ Rajapth Pared ನಲ್ಲಿ ಪ್ರದರ್ಶನವಾಗುತ್ತಿರುವ ಏಕೈಕ ಸ್ಥಬ್ದಚಿತ್ರ ಕರ್ನಾಟಕದ Karnataka ಕರಕುಶಲ. ಇದು “ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು” ಎನ್ನುವ ಧ್ಯೇಯದಡಿ ಅನಾವರಣಗೊಳ್ಳಲಿದೆ.
ಈ ಗಣರಾಜ್ಯೋತ್ಸವ ದಿನದ ಮೆರವಣಿಗೆಯಲ್ಲಿ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆ, ಕಿನ್ನಾಳ ಗೊಂಬೆ, ಇಲಕಲ್ ಸೀರೆ, ಉಡುಪಿ ಸೀರೆ ಮತ್ತು ಮೈಸೂರು ಗಾಂಜೀಫ ಕಲೆಗಳು ಸೇರಿದಂತೆ ಐಜಿ ಟ್ಯಾಗ್ ಇರುವ ರಾಜ್ಯದ 16 ಕರಕುಶಲಗಳು ಪ್ರದರ್ಶನವಾಗಲಿವೆ. ಈ ಪೆರೇಡ್ ಗೆ ಕರ್ನಾಟಕದ ಟ್ಯಾಬ್ಲೊ ಪ್ರದರ್ಶನವಾಗುತ್ತಿರುವುದು 13ನೇ ಬಾರಿ. ಇದು ಸಂತಸದ ಸಂಗತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.