SSLC – PU ಮಂಡಳಿ ವಿಲೀನ – ವಿಧಾನಸಭೆಯಲ್ಲಿ ಅನುಮೋಧನೆ..
SSLC – PU ಮಂಡಳಿ ವಿಲೀನ
ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ
ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸುವ ಉದ್ದೇಶದಿಂದ
ಸರ್ಕಾರದಿಂದ ಈ ಕ್ರಮ ಎಂದ ಶಿಕ್ಷಣ ಸಚಿವರು
ಅಧಿವೇಶನದ ಚರ್ಚೆ ವೇಳೆ ಬಿ ಸಿ ನಾಗೇಶ್ ಸ್ಪಷ್ಟನೆ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸುವ ‘ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ತಿದ್ದುಪಡಿ) ವಿಧೇಯಕ’ಕ್ಕೆ ವಿಧಾನಸಭೆ ಗುರುವಾರ (ಸೆ 28) ಅನುಮೋದನೆ ನೀಡಿದೆ.
ಎರಡೂ ಮಂಡಳಿಗಳು ವಿಲೀನಗೊಂಡರೂ ಈಗಿರುವ ರೀತಿಯಲ್ಲಿ ಪ್ರತ್ಯೇಕವಾಗಿ ಪಬ್ಲಿಕ್ ಪರೀಕ್ಷೆಗಳು ಮುಂದುವರಿಯುತ್ತವೆ. ಅನಗತ್ಯ ಗೊಂದಲಗಳು ಬೇಡ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧೇಯಕದ ಮೇಲಿನ ಚರ್ಚೆಯ ವೇಳೆ ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎರಡೂ ಮಂಡಳಿಗಳೂ ಒಗ್ಗೂಡಿದ ನಂತರ ಅದರ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ’ ಎಂದು ಬದಲಿಸಲಾಗುವುದು. ಈ ಮಂಡಳಿಯನ್ನು ಓರ್ವ ಐಎಎಸ್ ಅಧಿಕಾರಿ ನಿರ್ವಹಿಸುತ್ತಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಉದ್ದೇಶದಿಂದ ಎರಡೂ ಮಂಡಳಿಗಳ ವಿಲೀನಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.