Karnataka Rajyotsava | ಕರ್ನಾಟಕ, ಕರುನಾಡು ಪದದ ಮೂಲದ ಬಗ್ಗೆ ಇರುವ ಅಭಿಪ್ರಾಯಗಳು
ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯ ಸಜ್ಜಾಗಿದೆ. ಇದು ಕನ್ನಡಿಗರ ಹಬ್ಬ. ಜಾತಿ, ಧರ್ಮ ಬೇಧವಿಲ್ಲದೇ ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಹೆಮ್ಮೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ.
ನವೆಂಬರ್ ತಿಂಗಳು ಪೂರ್ತಿ ರಾಜ್ಯ ಕನ್ನಡ ಮಯವಾಗಿರುತ್ತದೆ. ಆಟೋ ರಿಕ್ಷಾ ಮತ್ತು ಇತರೆ ವಾಹನಗಳ ಮೇಲೆ ಕನ್ನಡದ ಬಾವುಟ ರಾರಾಜಿಸುತ್ತಿರುತ್ತದೆ.
ಕೇವಲ ಕರ್ನಾಟಕ ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯಲ್ಲಿ ನೆಲಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.
ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ,ಮೈಸೂರು ರಾಜ್ಯವನ್ನು ಒಡೆಯರ್ ಮಹಾರಾಜರು ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು.
1956 ರಲ್ಲಿ, ಮೈಸೂರು ರಾಜ್ಯದ ಗಡಿಗಳನ್ನು ಇತರ ಪಕ್ಕದ ರಾಜ್ಯಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಲು ಮರು ವ್ಯಾಖ್ಯಾನಿಸಲಾಯಿತು.
ತೆಲುಗು ಮಾತನಾಡುವ ಪ್ರದೇಶಗಳನ್ನು ಒಳಗೊಂಡ ನೆರೆಹೊರೆಯ ಆಂಧ್ರಪ್ರದೇಶವನ್ನು ಸಹ ಅದೇ ದಿನ ರಚಿಸಲಾಯಿತು.
ನವೆಂಬರ್ 1, 1973 ರಂದು ಈ ಹೆಸರನ್ನು ‘ಮೈಸೂರು’ ನಿಂದ ‘ಕರ್ನಾಟಕ’ ಎಂದು ಬದಲಾಯಿಸಲಾಯಿತು. ಇದು ಕರ್ನಾಟಕ ಏಕೀಕರಣ ಚಳುವಳಿಯ ಫಲ.
ಕರ್ನಾಟಕ ರಾಜ್ಯ ರೂಪುಗೊಂಡ ಸಂದರ್ಭದಲ್ಲಿ ಒಟ್ಟು 19 ಜಿಲ್ಲೆಗಳಿದ್ದವು. ಅದಿನಿಂದ ನವೆಂಬರ್ ಒಂದನ್ನು ಕನ್ನಡ ರಾಜ್ಯೋತ್ಸ ಕರ್ನಾಟಕ ರಾಜ್ಯೋತ್ಸವವಾಗಿ ಆಚರಣೆ ಮಾಡಲಾಗುತ್ತಿದೆ.
ಅಂದಹಾಗೆ ಕರ್ನಾಟಕ ಪದದ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿವೆ.
ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ. ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಇನ್ನೂ ಹಲವು ಅಭಿಪ್ರಾಯಗಳೂ ಇದೆ. ಕರು+ನಾಡು= ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ.
ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾಗಿದ್ದರಿಂದ ಬ್ರೀಟಿಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತಂತೆ.
‘ಕರು’ ಮತ್ತು ‘ನಾಡು’ ಸೇರಿ “ ಎತ್ತರದ ಭೂಮಿ’ ಎಂಬ ಅರ್ಥದಲ್ಲಿ ಕರುನಾಡು ಎಂಬ ಪದ ಬಂದಿದೆ ಎಂದು ಹೇಳಲಾಗುತ್ತದೆ.
ಇದಲ್ಲದೆ ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಲಾಗುತ್ತದೆ. ಅಂದ್ರೆ ಬಯಲು ಸೀಮೆಯ ಕಪ್ಪು ಹತ್ತಿ ಮಣ್ಣಿನಿಂದ ಈ ಹೆಸರು ಬಂದಿದೆ ಎಂದು ಹೇಳಳಾಗುತ್ತಿದೆ.