ಕರ್ನಾಟಕ – ಮಂಗಳವಾರ 1,298 ಹೊಸ ಕೊರೋನವೈರಸ್ ಪ್ರಕರಣಗಳು ದಾಖಲು
ಕರ್ನಾಟಕವು ಮಂಗಳವಾರ (ಆಗಸ್ಟ್ 17) ರಂದು 1,298 ಹೊಸ ಕೊರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 21,481 ರಷ್ಟಿವೆ.
ಮಂಗಳವಾರ ರಾಜ್ಯದಲ್ಲಿ 32 ಕೊರೋನಾ ವೈರಸ್ ಸಂಬಂಧಿಸಿದ ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 37,039 ಕ್ಕೆ ಏರಿದೆ.
ರಾಜ್ಯವು ಮಂಗಳವಾರ ಆಸ್ಪತ್ರೆಗಳಿಂದ 1,833 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 28,73,281 ಡಿಸ್ಚಾರ್ಜ್ ಆಗಿದ್ದಾರೆ.
ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ಕರ್ನಾಟಕದಲ್ಲಿ 29,31,827 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ದರವು 1.01% ರಷ್ಟಿದ್ದರೆ, ದಿನದ ಸಾವಿನ ಪ್ರಮಾಣ 2.46% ಆಗಿದೆ.
ಇಲ್ಲಿಯವರೆಗೆ 3,53,62,372 ಜನರು ಲಸಿಕೆ ಪಡೆದಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ವೆಜ್ ಪನೀರ್ ಫ್ರೈಡ್ ರೈಸ್ https://t.co/bpvIFfVtRu
— Saaksha TV (@SaakshaTv) August 16, 2021
ಬೇಸಿಗೆಯಲ್ಲಿ ಈರುಳ್ಳಿಯನ್ನು ಏಕೆ ಹೆಚ್ಚು ಬಳಸಬೇಕು?#Saakshatv #healthtips #summer #onion https://t.co/lB7oABRZJx
— Saaksha TV (@SaakshaTv) August 16, 2021
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ – ಎಸ್ಬಿಐನಿಂದ ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ#StateBank #Homeloans https://t.co/W0TBsvT9cV
— Saaksha TV (@SaakshaTv) August 15, 2021
ನಿಂಬೆಯ ಅತಿಯಾದ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು#Saakshatv #healthtips #lemon https://t.co/5YGdDNcKq3
— Saaksha TV (@SaakshaTv) August 15, 2021
#Karnataka #newCovid