ADVERTISEMENT
Tuesday, May 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶೀಘ್ರವೇ ಹೆಮ್ಮಾರಿ ಕೊರೊನಾದಿಂದ ಕರ್ನಾಟಕ ಮುಕ್ತ: ರಾಜ್ಯಪಾಲ ವಜುಬಾಯ್ ವಾಲಾ ವಿಶ್ವಾಸ..!

Kariyappa N by Kariyappa N
January 28, 2021
in Newsbeat, Politics, Samagra karnataka, ರಾಜ್ಯ
wala
Share on FacebookShare on TwitterShare on WhatsappShare on Telegram

ಬೆಂಗಳೂರು: ಇಂದಿನಿಂದ 7 ದಿನಗಳ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭವಾಗಿದೆ. ರಾಜ್ಯಪಾಲ ವಜುಬಾಯಿ ವಾಲಾ ಜಂಟಿ ಅಧಿವೇಶನವನ್ನುದ್ದೇಶಿ ಭಾಷಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಬಜೆಟ್ ಅಧಿವೇಶನಕ್ಕೆ ಮೊದಲು ಜಂಟಿ ಅಧಿವೇಶನ ನಡೆಯುತ್ತದೆ. ಸುವರ್ಣಸೌಧ ಕಾರ್ಯಾರಂಭ ಮಾಡಿದ ನಂತರ ಪ್ರತಿವರ್ಷ ಜಂಟಿ ಅಧಿವೇಶನವನ್ನು ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯಲ್ಲಿ ನಡೆಸುತ್ತಾ ಬಂದದೆ. ಆದರೆ, ಈ ಬಾರಿ ಕೊರೊನಾ ಕಾರಣಕ್ಕೆ ಬೆಳಗಾವಿ ಬದಲು ವಿಧಾನಸೌಧದದಲ್ಲೇ ಜಂಟಿ ಅಧಿವೇಶನ ನಡೆಸಲಾಗುತ್ತಿದೆ.


ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜುಬಾಯಿ ವಾಲಾ, ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಕೈಗೊಂಡ ಕ್ರಮಗಳನ್ನು ಕೊಂಡಾಡಿದರು. ಕೊರೊನಾ ವೈರಸ್ ಸದ್ಯದಲ್ಲೇ ರಾಜ್ಯದಿಂದ ತೊಲಗಲಿದ್ದು, ಕರ್ನಾಟಕ ಹೆಮ್ಮಾರಿಯಿಂದ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ರಾಜ್ಯಪಾಲರು, ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಾಕಷ್ಟು ಶ್ರಮಿಸಿದೆ ಎಂದರು.
ಕೊರೊನಾ ಸೇವೆ ಮಾಡುತ್ತಾ ಮೃತಪಟ್ಟ ಸರಕಾರಿ ನೌಕರರಿಗೆ 30 ಲಕ್ಷ ಸರ್ಕಾರ ಘೋಷಿಸಿದೆ. ಸಾಂಕ್ರಾಮಿಕ ಪರಿಸ್ಥಿತಿಯ ನಡುವೆಯೂ ಸರಕಾರದ ಸಾಧನೆ ಗಣನೀಯವಾಗಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.8ರಷ್ಟು ಹಾಗೂ ದೇಶದ ಮಾಹಿತಿ ತಂತ್ರಜ್ಞಾನ ರಫ್ತಿಗೆ ಶೇ. 40 ರಷ್ಟು ಕೊಡುಗೆಯನ್ನು ಕರ್ನಾಟಕ ನೀಡಿದೆ. ರಾಜ್ಯವು ಮೀನುಗಾರಿಕೆಯಲ್ಲಿ ವಾರ್ಷಿಕ ಸರಾಸರಿ 2.9ರ ವೃದ್ಧಿ ದರವನ್ನು ಸಾಧಿಸಿದೆ ಎಂದು ರಾಜ್ಯಪಾಲರು ತಿಳಿಸಿದರು.

Related posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

May 25, 2026
ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

May 25, 2026


ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಆರ್‍ಟಿ-ಪಿಸಿಆರ್ ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, ಪ್ರತಿ ಲಕ್ಷ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿಯೇ ಅತಿ ಹೆಚ್ಚು ಪರೀಕ್ಷೆಗಳು ರಾಜ್ಯದಲ್ಲಿ ನಡೆದಿವೆ. 248 ಕೋಟಿ ರೂ. ವೆಚ್ಚದಲ್ಲಿ ವೆಚ್ಚದಲ್ಲಿ 1.36 ಲಕ್ಷ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಹುದ್ದೆಗಳಿಗೆ ನೇಮಕ
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 603 ಪಿಎಸ್‍ಐ ಮತ್ತು 3,566 ಕಾನ್‍ಸ್ಟೇಬಲ್‍ಗಳನ್ನು 2019-20ನೇ ಸಾಲಿನಲ್ಲಿ ಭರ್ತಿ ಮಾಡಲಾಗಿದೆ. 2020 -21ನೇ ಸಾಲಿನಲ್ಲಿ 653 ಪಿಎಸ್‍ಐ ಹುದ್ದೆಗಳಿಗಾಗಿ ಹಾಗೂ 6,685 ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕ್ರೀಡೆಗೆ ಒತ್ತು ನೀಡುವ ದೃಷ್ಟಿಕೋನದಿಂದ ಶೇ.2ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದ್ದಾರೆ.

ಮಾದಕ ವಿರುದ್ಧ ಸರಕಾರ ಯುದ್ಧ
ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರಕಾರ ಯುದ್ಧ ಘೋಷಣೆ ಮಾಡಿದೆ. ಮಾದಕ ವಸ್ತುಗಳ ಮಾರಾಟ, ಬಳಕೆ ನಿಯಂತ್ರಣಕ್ಕೆ ಎಲ್ಲ ಕಾನೂನು ಜಾರಿ ಏಜೆನ್ಸಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ. ಒಟ್ಟು 4,066 ಪ್ರಕರಣಗಳು ದಾಖಲಾಗಿದ್ದು, 34 ಕೋಟಿ ರೂಪಾಯಿ ಮೊತ್ತದ ಮಾದಕ ವಸ್ತುಗಳನ್ನು ಇಲ್ಲಿವರೆಗೂ ಜಪ್ತಿ ಮಾಡಲಾಗಿದೆ. ಸಂತ್ರಸ್ತರ ಕರೆಗಳಿಗೆ ತುರ್ತು ಸ್ಪಂದನೆ ನೀಡಲು 80 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಂಟ್ರಲ್ ಕಮಾಂಡ್ ಸೆಂಟರ್ ನಿರ್ಮಾಣಕ್ಕಾಗಿ ಅನುಮೋದನೆ ನೀಡಲಾಗಿದೆ ಎಂದರು.

ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ
9,22,605 ಪ್ರವಾಹ ಪೀಡಿತ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 710 ಕೋಟಿ ರೂಪಾಯಿ ಹುಟ್ಟುವಳಿ ಸಹಾಯ ಧನವನ್ನು ಸರಕಾರ ವಿತರಿಸಿದೆ. ಪ್ರಮುಖ ಮೂಲಸೌಕರ್ಯಗಳ ದುರಸ್ತಿ ಕಾರ್ಯಗಳಿಗೆ 423 ಕೋಟಿ ರೂ. ಬಿಡುಗಡೆ ಮಾಡಿದೆ. ಒಟ್ಟಾರೆ ಪ್ರವಾಹ ಪರಿಹಾರಕ್ಕಾಗಿ 1,345 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜುಬಾಯ್ ವಾಲಾ ತ್ಮ ಭಾಷಣದಲ್ಲಿ ವಿವರ ನೀಡಿದ್ದಾರೆ..
ಕೋವಿಡ್ ಸಂಕಷ್ಟ ಇದ್ದರೂ ವಾಣಿಜ್ಯ ತೆರಿಗೆಗಳ ಇಲಾಖೆಯು 30,467 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಹಾಗೂ ಅಬಕಾರಿ ಇಲಾಖೆಯು 16,788 ಕೋಟಿ ರೂಪಾಯಿಗಳ ರಾಜಸ್ವವನ್ನು ಸಂಗ್ರಹಿಸಿದೆ. ಸ್ವಯಂಚಾಲಿತ ದರ ಸಂಗ್ರಹಣೆಗಾಗಿ ಒಂದು ದೇಶ ಒಂದು ಕಾರ್ಡ್ ಯೋಜನೆಯನ್ನು ಬೆಂಗಳೂರು ಮೆಟ್ರೋ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಡಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ ಎಂದರು.
385 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. 28 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೌಕಾ ವಾಯುಪ್ರದೇಶದ ಪಕ್ಕದಲ್ಲಿ ಸಿವಿಲ್ ಏನ್ ಕ್ಲೇವ್ ಅಭಿವೃದ್ಧಿ ಪ್ರಗತಿಯಲ್ಲಿದೆ. 220 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅನುಮೋದಿಸಿದೆ ಎಂದು ರಾಜ್ಯಪಾಲರು ತಿಳಿಸಿದರು.

ರಾಜ್ಯಪಾಲರ ಭಾಷದ ಕೆಲ ಅಂಶಗಳು..
* ಎಲ್ಲಾ ಇಲಾಖೆಗಳಿಗೆ ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಡಿ ನಾಗರೀಕರು ಸರ್ಕಾರಕ್ಕೆ ಆನ್ ಲೈನ್ ಮೂಲಕ ತೆರಿಗೆ ಪಾವತಿ.
* ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮ.
* ವಾಣಿಜ್ಯ ತೆರಿಗೆಗಳ ಇಲಾಖೆ ಮೂಲಕ 30,467 ಕೋಟಿ ರೂ ತೆರಿಗೆ ಸಂಗ್ರಹ
* ಅಬಕಾರಿ ಇಲಾಖೆ 16.788 ಕೋಟಿ ರೂ ರಾಜಸ್ವ ಸಂಗ್ರಹ
* ಪ್ರವಾಹ ಪೀಡಿತ 9,22,605 ರೈತರ ಅಕೌಂಟ್‍ಗಳಿಗೆ 710 ಕೋಟಿ ರೂ ಸಹಾಯ ಧನ
* ಮೂಲಭೂತ ಸೌಕರ್ಯಗಳ ದುರಸ್ತಿ ಕಾರ್ಯಗಳಿಗೆ 423 ಕೋಟಿ ಬಿಡುಗಡೆ
* ಪೊಲೀಸ್ ಗೃಹ-2025 ಯೋಜನೆ ಅಡಿ 2,000 ಕೋಟಿ ರೂ ವೆಚ್ಚದಲ್ಲಿ 10,000 ಪೆÇಲೀಸ್ ವಸತಿ ಗೃಹ ನಿರ್ಮಾಣ
* ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು 1567 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭ
* 2051 ಜನರನ್ನು ಹಾಗೂ 482 ಕೋಟಿ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳನ್ನು ರಕ್ಚಿಸಿದೆ
* 25 ಕೋಟಿ ರೂಪಾಯಿ ವೆಚ್ಚದ 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್?ಫಾರ್ಮ್ ಖರೀದಿಗೆ ಅನುಮೋದನೆ
* ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಚರಣೆಗಳಿಗಾಗಿ ಅತ್ಯಾಧುನಿಕ ರಕ್ಷಣಾ ಸಾಧನ ಸಲಕರೆಗಾಗಿ ಸರ್ಕಾರವು 30 ಕೋಟಿ ರೂಪಾಯಿ ಮಂಜೂರು ಮಾಡಿದೆ
* 25 ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ನಿರ್ಧಾರ
* ಎಸ್ ನಿಜಲಿಂಗಪ್ಪನರವ ಜನ್ಮಸ್ಥಳ ಅಭಿವೃದ್ಧಿಗೆ ಯೋಜನೆ

Tags: B S YADIYURAPPAbjp govtfree from coronaGovernerkarnataka statevajubai wala
ShareTweetSendShare
Join us on:

Related Posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

by Shwetha
May 25, 2026
0

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಅತ್ಯಂತ ಸಂತಸದ ಸುದ್ದಿಯೊಂದು ಸಿಗುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ...

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

by Shwetha
May 25, 2026
0

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಬೇಕು ಎಂದು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ...

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

by Shwetha
May 25, 2026
0

ಬೆಂಗಳೂರು: ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ತನ್ನ ಕೋಟ್ಯಂತರ ಚಂದಾದಾರರಿಗೆ ಅತ್ಯಂತ ಸುಲಭ ಮತ್ತು ಡಿಜಿಟಲ್ ಸ್ನೇಹಿ ಸೇವೆಯನ್ನು ಒದಗಿಸಲು ಮುಂದಾಗಿದೆ. ಇನ್ಮುಂದೆ ನಿಮ್ಮ ಪಿಎಫ್...

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

by Shwetha
May 25, 2026
0

ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತನ್ ಯು ಕೇಳ್ಕರ್ ಅವರನ್ನು ಪ್ರಮುಖ ಸರ್ಕಾರಿ ಹುದ್ದೆಗೆ ನೇಮಕ ಮಾಡಿರುವುದು ಈಗ ದೊಡ್ಡ ರಾಜಕೀಯ ಗದ್ದಲಕ್ಕೆ...

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಅಸ್ತಿತ್ವಕ್ಕೇ ಸಂಚಕಾರ ತಂದಿದೆಯೇ ಕಾಕ್ರೋಚ್ ಜನತಾ ಪಾರ್ಟಿ? : ಪ್ರಲ್ಹಾದ್ ಜೋಶಿ

by Shwetha
May 25, 2026
0

ಹುಬ್ಬಳ್ಳಿ: ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿವಾದಾತ್ಮಕ ಹೆಸರಿನ ವಿಚಾರವಾಗಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಬೆಳವಣಿಗೆಯಿಂದ ಬಿಜೆಪಿ ವಿಚಲಿತವಾಗಿದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram