ಹೆಂಡತಿಗೆ ಹೊಡೆಯೋದ್ರಲ್ಲಿ ಕರ್ನಾಟಕವೇ ನಂಬರ್ 1 – NFHS ಸಮೀಕ್ಷೆ..

1 min read

ಹೆಂಡತಿಗೆ ಹೊಡೆಯೋದ್ರಲ್ಲಿ ಕರ್ನಾಟಕವೇ ನಂಬರ್ 1 – NFHS ಸಮೀಕ್ಷೆ..

ಇಡೀ ದೇಶದಲ್ಲಿ ಹೆಂಡತಿಗೆ ಹೊಡೆಯೋದ್ರಲ್ಲಿ ಕರ್ನಾಟಕವೇ ನಂಬರ್ 1 ಎನ್ನುವ ಆಘಾತಕಾರಿ ಮಾಹಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS)ಯಲ್ಲಿ ತಿಳಿದುಬಂದಿದೆ.

2019-2021 ರಲ್ಲಿ  ಮಾಡಲಾದ ಸಮೀಕ್ಷೆಯ ಪ್ರಕಾರ ಕರ್ನಟಕದ 44% ವಿವಾಹಿತ ಮಹಿಳೆಯರು ತಾವು ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.ಇದು ಕೋವಿಡ್ ಲಾಕ್‌ಡೌನ್‌ಗೆ ಮೊದಲು ನಡೆಸಲಾದ ಸಮೀಕ್ಷೆ, ಲಾಕ್ ಡೌನ್ ನಂತರ ಇದರ ಸಂಖ್ಯೆಗಳು ಏರಿರಬಹುದು ಎಂಬುದನ್ನು ಗಮನಿಸಬೇಕು.

ಗಂಭೀರವಾಗಿ ಯೋಚಿಸಬೇಕಾದ ವಿಷಯವೆಂದರೆ ಬಿಹಾರವನ್ನ ಹಿಂದಿಕ್ಕಿ ಕರ್ನಾಟಕ ನಂಬರ್ 1 ಸ್ಥಾನಕ್ಕೇರಿರುವುದು,  ಬಿಹಾರ 2 ನೇ ಸ್ಥಾನದಲ್ಲಿದೆ.

18 ರಿಂದ 49 ವರ್ಷ ಮಹಿಳೆಯರನ್ನ ಬಳಸಿಕೊಂಡು ಈ ಸರ್ವೇ ಪ್ರಕಾರ ರಾಜ್ಯದ ಶೇ.‌ 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲಾಗಿದೆ. ಬಿಹಾರಕ್ಕಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕವಾಗಿರೋದು ಪತ್ತೆಯಾಗಿದೆ. ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರು ಸಂಗಾತಿ ಹಿಂಸೆ ಅನುಭವಿಸಿದ್ದಾರೆ. ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗ್ತಿರುವ ಬಗ್ಗೆ ಸರ್ವೇಯಲ್ಲಿ ಮಹಿಳೆಯರು ಹೇಳಿಕೊಂಡಿದ್ದಾರೆ.

ಪತಿಯಿಂದ ಹಿಂಸೆಗೆ ಒಳಪಡುವ ಭಾಗಶಃ ಮಹಿಳೆಯರು ಸಮಾಜಕ್ಕೆ ಹೆದರಿ ಮೌನ ವಹಿಸಿದ್ದಾರೆಂದು ವರದಿ ಹೇಳುತ್ತಿದೆ. ಶೇ.‌ 58ರಷ್ಟು ಮಹಿಳೆಯರು ತವರು ಮನೆಯವರಿಂದ ಸಹಾಯ ಪಡೆಯಲು ಮುಂದಾಗಿರುವುದು ಪತ್ತೆಯಾಗಿದೆ. ಶೇ.‌ 27ರಷ್ಟು ಮಹಿಳೆಯರು ಅತ್ತೆ, ಮಾವನ ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಶೇ. 9ರಷ್ಟು ಮಹಿಳೆಯರು ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಶೇ. 2ರಷ್ಟು ಮಹಿಳೆಯರು ಧಾರ್ಮಿಕ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಕೇವಲ ಶೇ. 1 ರಷ್ಟು ಮಹಿಳೆಯರು ಮಾತ್ರ ಪೊಲೀಸ್ ಹಾಗೂ ವಕೀಲರಿಂದ ಸಹಾಯ ಪಡೆಯಲು ಮುಂದಾಗಿರುವುದು ಸರ್ವೇಯಲ್ಲಿ ತಿಳಿದುಬಂದಿದೆ.

Karnataka stands at no.1 position in the NHFS survey report of husband beating his wife

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd