Karnataka budget | ರಾಜ್ಯ ಬಜೆಟ್ 2022 ಹೈಲೆಟ್ಸ್
ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ
2,65,720 ಕೋಟಿ ರೂ. ಗಾತ್ರದ ಕರ್ನಾಟಕ ಬಜೆಟ್
ಗೋವುಗಳ ದತ್ತು ಪಡೆಯಲು ಪುಣ್ಯ ಕೋಟಿ ಯೋಜನೆ
ರೈತರ ಡಿಸೇಲ್ ಬಳಕೆಗೆ ಸಬ್ಸಿಡಿ ನೀಡಲು ನಿರ್ಧಾರ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ 2,65,720 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು ಹೀಗಿವೆ..
ರೈತರಿಗೆ ಡಿಸೇಲ್ ಬಳಕೆಗೆ ಸಬ್ಸಿಡಿ ಘೋಷಣೆ. 7 ಹೊಸ ವಿಶ್ವ ವಿದ್ಯಾಲಯಗಳ ಘೋಷಣೆ. ಪುಣ್ಯ ಕೋಟಿ ಯೋಜನೆ. ಅಕ್ರಮ ಸಕ್ರಮ ಯೋಜನೆ ಘೋಷಣೆ. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ.
ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಸ್ತರಣೆ. 200 ಕನ್ನಡ ಚಲನ ಚಿತ್ರಗಳಿಗೆ ಸಹಾಯಧನ ಘೋಷಣೆ. ಧಾರ್ಮಿಕ ದತ್ತಿ ಇಲಾಖೆ ತಸ್ತೀಕ್ 60, ಸಾವಿರ ರೂ ಗಳಿಗೆ ಹೆಚ್ಚಳ. ಮುಜರಾಯಿ ದೇವಸ್ಥಾನ ಗಳಿಗೆ ಸ್ವಾಯತ್ತ ತೆ ನೀಡಲು ಕ್ರಮ. ಕೆ ಎಸ್ ಆರ್ ಪಿ ಮಹಿಳಾ ಕಂಪನಿ ಆರಂಭ.