ಬಳ್ಳಾರಿ: ಪಶ್ಚಿಮ ಘಟ್ಟ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ತುಂಗಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನಲೆ ತುಂಗಾ ನದಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದ್ದು, ಭದ್ರಾ ನದಿಯಿಂದಲೂ ಹೆಚ್ಚಯವರಿ ನೀರು ಹೊರ ಬಿಡುವ ಸಂಭವವಿದೆ. ತುಂಗಾನದಿಯಿಂದ 70 ಸಾವಿ ಕ್ಯೂಸೆಕ್ ನೀರು ಹೊರಬಿಡುವ ಪರಿಣಾಮ ಇದೀಗ ನದಿ ಪಾತ್ರದ ಜನರಲ್ಲಿ ಆತಂಕ ಶುರುವಾಗಿದೆ. ನದಿತಟದ ಒಟ್ಟು 32 ಹಳ್ಳಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದ್ದು, ಜನರ ಸುರಕ್ಷತೆಗೆ 32 ಕಾಳಜಿ ಕೇಂದ್ರಗಳ ನಿರ್ಮಾಣ ಮಾಡಲಾಗಿದೆ. ನದಿಪಾತ್ರದ ಅಪಾಯದಂಚಿನ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದೆ. ತೀವ್ರ, ಮಧ್ಯಮ ಹಾಗೂ ಕಡಿಮೆ ಅಪಾಯವನ್ನ ಎದುರಿಸೋ ಹಳ್ಳಿಗಳಿಗೆ ತಾಲೂಕಿನ ತಹಶೀಲ್ದಾರರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.
fifaworldcup-2026: ಫುಟ್‍ಬಾಲ್ ಅಂಗಳದ ಈಜಿಪ್ಟ್ ಚಿರತೆ ಮಹಮ್ಮದ್ ಸಲಾಹ್.. ಆಟದಷ್ಟೇ ಹೃದಯ ಗೆದ್ದ ಮಾಣಿಕ್ಯ..!⚽👑🇪🇬 🐆
ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ.. ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ.. ಹೀಗೂ ಇದೆಯಾ ಅನ್ನೋ ಯೋಚನೆ..! 🚀🔥⚽ ಇದು ಒಂದು ಸಣ್ಣ ಹಳ್ಳಿಯ ಕೆಳ...








