karthi chidambaram
ಬಿಹಾರ: ಬಿಹಾರದಲ್ಲಿ ಸದ್ಯ ಎನ್ ಡಿಎ ಬಹುಮತ ಸಾಧಿಸಿದ್ದು, ಕಾಂಗ್ರೆಸ್ ಮುಖಂಡರು ಮತ್ತೊಮ್ಮೆ ಇವಿಎಂ ಅನ್ನು ಧೂಷಣೆ ಮಾಡಲು ಶುರುಮಾಡಿಬಿಟ್ಟಿದ್ದಾರೆ. ಇದರ ನಡುವೆಯೇ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಹೌದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ, ಡಾ. ಉದಿತ್ ರಾಜ್ ಸೇರಿದಂತೆ ಕೆಲವರು ಟ್ವೀಟ್ ಮೂಲಕ ಇವಿಎಂ ಮಷಿನ್ ಸರಿಯಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಅಸಮಾಧಾನ ಹೊರಹಾಕಿರುವ ಕಾರ್ತಿ ಚಿದಂಬರಂ ಅವರು ‘ದಯವಿಟ್ಟು ಈ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ದೇಶದಲ್ಲಿ ಯಾವುದೇ ಚುನಾವಣೆಗಳ ಫಲಿತಾಂಶವು ಏನೇ ಬಂದರೂ ಮೊದಲು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ವಿರುದ್ಧ ಹೇಳಿಕೆಗಳು ನೀಡುವುದನ್ನ ನಿಲ್ಲಿಸಿ‘ ಎಂದಿದ್ದಾರೆ.
ಇದೇ ವೇಳೆ ‘ಯಾವುದೇ ಪಕ್ಷ ಆದರೂ ಇವಿಎಂ ದೋಷದಿಂದ ಫಲಿತಾಂಶದಲ್ಲಿ ವ್ಯತ್ಯಾಸ ಆಗುತ್ತಿದೆ ಎನ್ನುವ ಆರೋಪ ಮಾಡುವುದು ಸರಿಯಲ್ಲ. ನನ್ನ ಅನುಭವದ ಪ್ರಕಾರ, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಗಳು ಹೆಚ್ಚು ಉಪಯುಕ್ತ, ನಿಖರ ಹಾಗೂ ವಿಶ್ವಾಸಾರ್ಹವಾಗಿವೆ. ಆದ್ದರಿಂದ ಬೇರೆ ಪಕ್ಷ ಗೆದ್ದ ಮಾತ್ರಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ತಿ ಚಿದಂಬರಂ ಅವರ ಈ ಹೇಳಿಕೆ ತೀವ್ರ ಅಚ್ಚರಿಗೆ ಕಾರಣವಾಗಿದೆ.
karthi chidambaram
`ಹುಲಿಯಾ’ ಕಾಡಿಗೆ, `ಬಂಡೆ’ ಛಿದ್ರ : ಕಟೀಲ್ ತಿರುಗೇಟು
ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ : ಮುನಿರತ್ನ
`ರಾರಾ’ಜಿಸಿದ ಮುನಿ`ರತ್ನ’: ಹ್ಯಾಟ್ರಿಕ್ ಗೆಲುವು ಸಾಧನೆ, ಆಧಿಕೃತ ಘೋಷಣೆ ಬಾಕಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel