ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ : ಮುನಿರತ್ನ
ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ 57936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಈ ಗೆಲುವಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಮೊದಲು ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದರು.
ಕಳೆದ ಚುನಾವಣೆಯಲ್ಲಿ 26 ಸಾವಿರ ಲೀಡ್ ಬಂದಿತ್ತು. ಆದರೆ ಈ ಬಾರಿ ಸುಮಾರು 57 ಸಾವಿರ ಲೀಡ್ ಬಂದಿದೆ. ಇದು ನನ್ನ ಕ್ಷೇತ್ರದ ಮತದಾರ ದೇವರುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ.
ಮೊದಲನೇ ಚುನಾವಣೆ 17 ಸಾವಿರ, ಎರಡನೇ ಚುನಾವಣೆ 26 ಸಾವಿರ ಹಾಗೂ ಮೂರನೇ ಚುನಾವಣೆ 57 ಸಾವಿರ ಲೀಡ್ ಬಂದಿದೆ.
ನೆಕ್ಟ್ ಟು ನೆಕ್ಟ್ ಫೈಟ್ ಇನ್ನಿಲ್ಲ.. ನಮ್ಮ ಗೆಲುವು ಖಚಿತ
ನನ್ನ ಗೆಲುವಿಗೆ ಬಿಜೆಪಿ ನಾಯಕರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲಾ ಸಚಿವರು, ಶಾಸಕರ ಮಿತ್ರರು ಹಾಗೂ ಕಾರ್ಯಕರ್ತರು ಕಾರಣವಾಗಿದ್ದು, ಪ್ರತಿಯೊಬ್ಬರಿಗೂ ಈ ಅಂತರವನ್ನು ಅರ್ಪಿಸುವುದಾಗಿ ತಿಳಿಸಿದರು.
ಇದೇ ವೇಳೆ ಪ್ರತಿಸ್ಪರ್ಧಿ ಕುಸುಮಾ ಅವರ ಬಗ್ಗೆ ಮಾತನಾಡಿದ ಮುನಿರತ್ನ, ಕೊನೆಯ ಕ್ಷಣದಲ್ಲಿ ನಾನು ಬಳಸದೇ ಇರುವ ಪದವನ್ನು ಬಳಸಿದ್ದೇನೆ ಅಂತ ಕಣ್ಣೀರು ಹಾಕಿದ್ದೀರಲ್ವ, ಅದಕ್ಕಿಂತ ದೊಡ್ಡ ತಪ್ಪು ಇನ್ಯಾವುದೂ ಇಲ್ಲ.
ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ನನ್ನ ಬಾಯಲ್ಲಿ ಕೊನೆಯುಸಿರು ಇರುವವರೆಗೆ ಯಾವುದೇ ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ.
ಗುಜರಾತ್ ನಲ್ಲಿ ಕಮಲ ಕಿಲಕಿಲ.. ಗೆಲುವಿನತ್ತ ಕೇಸರಿ ಪಡೆ
ಅಂತಹ ಪಾಪದ ಕೆಲಸ, ಪಾಪದ ಮಾತುಗಳು ನನ್ನ ಬಾಯಲ್ಲಿ ಬರಲ್ಲ. ಆದರೂ ಅಂತಹ ಪಾಪದ ಪದವನ್ನು ನಾನು ಉಪಯೋಗಿಸಿದ್ದೀನಿ ಎಂದು ಕಣ್ಣೀರು ಹಾಕಿದ್ರಿ. ಹೀಗಾಗಿ ಇನ್ನು ಮುಂದಕ್ಕಾದರೂ ಸತ್ಯ ಮಾತಾಡಿ ಎಂದು ಸಲಹೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel