The Kashmir Files : ಓಟಿಟಿಗೆ ಕಾಶ್ಮೀರ್ ಫೈಲ್ಸ್
ಸಣ್ಣ ಸಿನಿಮಾವಾಗಿ ಬಂದ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಗಳ ಸುನಾಮಿ ಎಬ್ಬಿಸಿತ್ತು.
ಯಾವುದೇ ನಿರೀಕ್ಷೆ ಇಲ್ಲದೆ ಮಾರ್ಚ್ 11 ರಂದು ತೆರೆಕಂಡ ಈ ಸಿನಿಮಾ ದೇಶಾದ್ಯಂತ 250 ಕೋಟಿ ಗಳಿಕೆ ಮಾಡುವ ಮೂಲಕ ಸಂಚಲನ ಮೂಡಿಸಿದೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಥಿಯೇಟರ್‌ಗಳಲ್ಲಿ ದಾಖಲೆ ಬರೆದ ಈ ಚಿತ್ರ ಇದೀಗ ಓಟಿಟಿಗೆ ಬರಲು ರೆಡಿಯಾಗಿದೆ.
ಚಿತ್ರ ಯೂನಿಟ್ ಕಾಶ್ಮೀರ ಫೈಲ್ಸ್ OTT ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.
ಮೇ 13 ರಿಂದ ಜಿ5 ನಲ್ಲಿ ಕಾಶ್ಮೀರ್ ಫೈಲ್ಸ್ ಪ್ರಸಾರವಾಗಲಿದೆ.
ಕಾಶ್ಮೀರ ಫೈಲ್ಸ್ ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಕನ್ನಡದಲ್ಲಿ ಲಭ್ಯವಿರುತ್ತವೆ.
kashmir-files-premiering-13th-may-zee-5