ಕಾಶ್ಮೀರಿ ಪಂಡಿತರ ಹತ್ಯೆ ಜೀವ: ತನಿಖೆ ಆರಂಭಿಸಿದ SIA
Kashmiri Pandit’s killing life: SIA initiates probe
ಇತ್ತೀಚಿಗೆ ರಿಲಿಸ್ ಆಗಿದ್ದ ಕಾಶ್ಮೀರ ಫೈಲ್ಸ್ ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚಿತ್ರದಲ್ಲಿ ತೋರಿಸಿರುವಂತೆ 90 ದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಹತ್ಯೆಗಳು ಚಿತ್ರದಲ್ಲಿ ತೋರಿಸಲಾಗಿತ್ತು. ಈ ಹತ್ಯೆಗಳು ಸತ್ಯ- ಸುಳ್ಳು ಎಂಬ ವಾದಗಳು ಆರಂಭವಾದವು. ಇದೀಗ ಈ ಹತ್ಯೆಗಳ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಹೌದು 1990ರ ದಶಕದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಗೆ ಒಳಗಾದ ಪ್ರಮುಖ ಕಾಶ್ಮೀರಿ ಪಂಡಿತರು ಸೇರಿದಂತೆ ವಿವಿಧ ಧರ್ಮೀಯರ ಹತ್ಯಾ ಪ್ರಕರಣಗಳಿಗೆ ಮರುಜೀವ ನೀಡಲು ತನಿಖಾ ಸಂಸ್ಥೆಗಳು ನಿರ್ಧರಿಸಿವೆ.
ಇದರ ಮೊದಲ ಭಾಗವಾಗಿ 1980ರ ನ 4ರಂದು ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ, ನಿವೃತ್ತ ನ್ಯಾಯಾಧೀಶ ನೀಲಕಂಠ ಗಂಜೂ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಜಮ್ಮು-ಕಾಶ್ಮೀರ ಪೊಲೀಸ್ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಆರಂಭಿಸಿದೆ. ಇದರ ಬೆನ್ನಲ್ಲೇ, ‘ಇನ್ನೂ ಕೆಲವು ಪ್ರಕರಣಗಳನ್ನು ಪುನಃ ತೆರೆಯುವ ಸಾಧ್ಯತೆಯೂ ಇದೆ.
ನ್ಯಾಯಾಧೀಶರಾದ ನೀಲಕಂಠ ಗಂಜೂ ಅವರು ಬ್ರಿಟನ್‌ನ ಭಾರತೀಯ ರಾಯಭಾರಿ ರವೀಂದ್ರ ಮಾತ್ರೆ ಅವರನ್ನು ಹತ್ಯೆ ಮಾಡಿದ್ದ ಮನ್ಸೂಲ್ ಭಟ್ ಎಂಬ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಉಗ್ರರು ನವೆಂಬರ್ 1989 ಅಮೀರ ಕಡಲ್‌ನ ಮಹಾರಾಜ್ ಬಜಾರ್‌ನಲ್ಲಿ ನ್ಯಾಯಾಧೀಶ ನೀಲಕಂಠ ಗಂಜೂ ಅವರನ್ನು ಹಗಲು ಹೊತ್ತಿನಲ್ಲೇ ಗುಂಡಿಕ್ಕಿ ಕೊಂದರು.








