ನೂಪುರ್ ಶರ್ಮಾ ತಲೆಕತ್ತರಿಸುವಂತೆ VFX ವೀಡಿಯೋ ಮಾಡಿದ್ದ ಯೂಟ್ಯೂಬರ್ ಅರೆಸ್ಟ್…
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ತಲೆಕತ್ತರಿಸುವಂತೆ VFX ವೀಡಿಯೊ ಪೋಸ್ಟ್ ಮಾಡಿದ್ದ ಕಾಶ್ಮೀರದ ಯೂಟ್ಯೂಬರ್ ಅನ್ನ ಶನಿವಾರ ಬಂಧಿಸಲಾಗಿದೆ.
ಯೂಟ್ಯೂಬ್‌ನಲ್ಲಿ ದೋಷಾರೋಪಣೆ ಮಾಡುವ ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ಕಾರಣದಿಂದ ಕಾಶ್ಮೀರ ಮೂಲದ ಯೂಟ್ಯೂಬರ್ ಫೈಸಲ್ ವಾನಿ ಅವರನ್ನು ಬಂಧಿಸಲಾಗಿದೆ. ಇದು ಸಾರ್ವಜನಿಕ ನೆಮ್ಮದಿಗೆ ವಿರುದ್ಧವಾಗಿದೆ ಮತ್ತು ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಇಂದು ಬೆಳಗ್ಗೆ ಫೈಸಲ್ ವಾನಿ ವೀಡಿಯೊವನ್ನು ಡಿಲಿಟ್ ಮಾಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕ್ಷಮೆಯಾಚಿಸಿದ್ದರು. ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಹೇಳಿದ್ದಾನೆ.
ಫೈಜಲ್ ವಾನಿ ಯಾರು?
ಫೈಸಲ್ ವಾನಿ ಒಬ್ಬ ಫಿಟ್‌ನೆಸ್ ಯೂಟ್ಯೂಬರ್. ಫೈಸಲ್ ಯೂಟ್ಯೂಬ್‌ನಲ್ಲಿ ಡೀಪ್ ಪೇನ್ ಫಿಟ್‌ನೆಸ್ ಎಂಬ ಚಾನೆಲ್ ಅನ್ನು ಹೊಂದಿದ್ದು, ಅದರಲ್ಲಿ ಬಾಡಿ ಬಿಲ್ಡಿಂಗ್‌ಗೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾನೆ.