“ಈ ದೇಶದ್ ಕಥೆ ಇಷ್ಟೇ ಕಣಮ್ಮೋ” ಎಂಬ ಸಾಲು ಹಾಕಿ ಹಂಸಲೇಖ ಬೆಂಬಲಿಸಿದ ಕವಿರಾಜ್..!

1 min read

“ಈ ದೇಶದ್ ಕಥೆ ಇಷ್ಟೇ ಕಣಮ್ಮೋ” ಎಂಬ ಸಾಲು ಹಾಕಿ ಹಂಸಲೇಖ ಬೆಂಬಲಿಸಿದ ಕವಿರಾಜ್..!

ಇತ್ತೀಚೆಗೆ ಮೈಸೂರಿನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವೊಂದ್ರಲ್ಲಿ ಭಾಗಿಯಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ,.. ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.. ಸಾಕಷ್ಟು ಆಕ್ರೋಶ ವ್ಯಕ್ತವಾದ ನಂತರ ಕೊನೆಗೂ ಹಂಸಲೇಖ ಅವರು ಕ್ಷಮೆಯಾಚಿಸಲೇಬೇಕಾಯಿತು..

ಇದರ ಬೆನ್ನಲ್ಲೇ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್ ಅವರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿ ಪೋಸ್ಟ್ ಹಾಕಿ ಹಂಸಲೇಖ ಅವರಿಗೆ ಬೆಂಬಲ ಸೂಚಿಸಿದ್ದಾರೆ..   ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಕವಿರಾಜ್ ಅವರು “ಹಂಸಲೇಖ ಸರ್ ಒಂದು ಅತ್ಯಂತ ಸದಾಶಯದ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದರು. ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ ಜನರ ವೇದನೆಗೊಂದು ದನಿಯಾಗಿ ಮಾತಾಡಿದ್ದರು.

ದೌರ್ಜನ್ಯಕ್ಕೊಳಗಾದವರ ಆಕ್ರೋಶವನ್ನು ಪ್ರತಿನಿಧಿಸುವಾಗ ಅದಕ್ಕೆ ಪೂರಕವಾಗಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಬಳಸಿದ ಖಾರವೆನಿಸಿದ ಒಂದೆರೆಡು ಪದಗಳನ್ನು ಇಟ್ಟುಕೊಂಡು ಕ್ಷಮೆ ಕೇಳಿಸಿಕೊಳ್ಳಲಾಗಿದೆ . ಆದರೆ ನಿಜವಾದ ಮಹತ್ವ ಸಿಗಬೇಕಾಗಿದ್ದು ಅವರ ಸದಾಶಯಕ್ಕೆ. ಅದು ಈ ಗಲಭೆಯಲ್ಲಿ ಮುಚ್ಚಿಯೇ ಹೋಯಿತು.ವಿಷಾದದ ವಿಷಯ ಎಂದರೆ ಅವರ ಮಾತುಗಳು ಯಾರ ಹಿತಾಸಕ್ತಿಯ ವಿರುದ್ಧವಿತ್ತೋ ಅವರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ವಿರೋಧಿಸಿದರು.

ಆದರೆ ಅವರ ಮಾತುಗಳ ಕಾಳಜಿ ಯಾರ ಪರವಿತ್ತೋ ಆ ಬಹುಸಂಖ್ಯಾತ ಜನರು ತಮಗೇನು ಸಂಬಂಧವಿಲ್ಲ , ನಮಗೇಕೆ ಎಂಬಂತೆ ಮೂಕ ಪ್ರೇಕ್ಷಕರಾಗಿ ಕುಳಿತರು. ಕೊನೆಗೆ ಅವರದೇ ಹಾಡು ನೆನಪಾಗುತ್ತೆ…

ಈ ದೇಶದ್ ಕಥೆ ಇಷ್ಟೇ ಕಣಮ್ಮೋ..

ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ..”ಎಂದು ಬರೆದುಕೊಂಡಿದ್ದಾರೆ..

ಕನ್ನಡದ ರಾಜರತ್ನ `ಪುನೀತ್ ನಮನ’ ಕಾರ್ಯಕ್ರಮ ಶುರು

ಅಪ್ಪು ಬಾಲ್ಯದಲ್ಲೇ ಅವರ ಎದೆ ನೋಡಿ ಭವಿಷ್ಯ ನಡುದಿದ್ದರಂತೆ ಚಿನ್ನೇಗೌಡರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd