ಜುಲೈ 7 ಮತ್ತು 8 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)
ಬೆಂಗಳೂರು, ಫೆಬ್ರವರಿ21: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜುಲೈ 7 ಮತ್ತು 8 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ನಡೆಸಲಿದೆ.
12 ನೇ ತರಗತಿ (II ಪಿಯುಸಿ) ಯ ವಿವಿಧ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿ ಮತ್ತು ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇತರ ರಾಜ್ಯಗಳಲ್ಲಿನ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಗಣಿಸಿದ ನಂತರ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಅಶ್ವತ್ ನಾರಾಯಣ್ ನೇತೃತ್ವದ ಸಮಿತಿಯು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ದಿನಾಂಕಗಳನ್ನು ಪ್ರಕಟಿಸಿತು.
ಕೆ-ಸಿಇಟಿ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತದೆ. ಆದರೆ, ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿ ಶೈಕ್ಷಣಿಕ ವರ್ಷ ವಿಳಂಬವಾಗಿದೆ. ಆದುದರಿಂದ ಉನ್ನತ ಶಿಕ್ಷಣ ಇಲಾಖೆ ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿತು. ಕಳೆದ ವರ್ಷವೂ ಲಾಕ್‌ಡೌನ್‌ನಿಂದಾಗಿ ಜುಲೈ ಅಂತ್ಯದಲ್ಲಿ ಪರೀಕ್ಷೆಗಳು ನಡೆದವು.
ಕೆ-ಸಿಇಟಿಗೆ ಪ್ರತಿವರ್ಷ ಸುಮಾರು 1.5 ಲಕ್ಷದಿಂದ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಗಡಿ ಜಿಲ್ಲೆಗಳು ಮತ್ತು ಇತರ ರಾಜ್ಯಗಳಿಂದ ಹೆಚ್ಚುವರಿಯಾಗಿ 50,000 ಜನರು ಕರ್ನಾಟಕದಾದ್ಯಂತ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ.
ಪರೀಕ್ಷೆಗಳ ವೇಳಾಪಟ್ಟಿ:
ಜುಲೈ 7: ಬುಧವಾರ ಬೆಳಗ್ಗೆ 10.30ರಿಂದ 11.50 – ಜೀವಶಾಸ್ತ್ರ,
ಜುಲೈ 7: ಬುಧವಾರ ಮಧ್ಯಾಹ್ನ 2.30ರಿಂದ 3.50 – ಗಣಿತ
ಜುಲೈ 8: ಗುರುವಾರ ಬೆಳಗ್ಗೆ 10.30ರಿಂದ 11.50 – ಭೌತಶಾಸ್ತ್ರ
ಜುಲೈ 8: ಗುರುವಾರ ಬೆಳಗ್ಗೆ 10.30ರಿಂದ 11.50 – ರಸಾಯನಶಾಸ್ತ್ರ
ಜುಲೈ 9: ಶುಕ್ರವಾರ ಬೆಳಗ್ಗೆ 11.30ರಿಂದ 12.30 – ರಾಜ್ಯ ಮತ್ತು ಗಡಿ ಜಿಲ್ಲೆ ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಪರೀಕ್ಷೆ
ಪ್ರತಿದಿನ ಬೆಳಿಗ್ಗೆ ನಿಂಬೆ ರಸ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/vDadOmnHSd
— Saaksha TV (@SaakshaTv) February 15, 2021
ಪಾಸ್ಟ್ಯಾಗ್‌ಗಳಿಂದ ಡಬಲ್ ಹಣ ಕಡಿತಗೊಳಿಸಿದರೆ ಏನು ಮಾಡಬೇಕು? https://t.co/TA0xAI07Rl
— Saaksha TV (@SaakshaTv) February 19, 2021